ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಹೊರ ವರ್ತುಲ‌ ರಸ್ತೆ ಕಾಮಗಾರಿ ಪರಿಶೀಲಿಸಿದ ಸಂಸದ ಬಿ.ವೈ. ರಾಘವೇಂದ್ರ - ಶಿವಮೊಗ್ಗ ಹೊರವರ್ತುಲ ರಸ್ತೆ ಕಾಮಗಾರಿ

ಶಿವಮೊಗ್ಗದ ಹೊರವಲಯದ ಹರಕೆರೆ ಬಳಿ ನಡೆಯುತ್ತಿರುವ ರಿಂಗ್ ರೋಡ್​​​​​​ ಕಾಮಗಾರಿಯನ್ನು ಇಂದು ಸಂಸದ ಬಿ.ವೈ. ರಾಘವೇಂದ್ರ ಇಂದು ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.

MP BY Raghavendra
ಸಂಸದ ಬಿ.ವೈ. ರಾಘವೇಂದ್ರ

By

Published : May 9, 2020, 7:38 PM IST

ಶಿವಮೊಗ್ಗ: ರಸ್ತೆ ಕಾಮಗಾರಿ ನಡೆಯುತ್ತಿರುವ ನಗರದ ಹೊರ ವಲಯ ಹರಕೆರೆಯ ಭಾಗಕ್ಕೆ ಸಂಸದ ಬಿ. ವೈ. ರಾಘವೇಂದ್ರ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿವಮೊಗ್ಗ ಹೊರ ವರ್ತುಲ ರಸ್ತೆ ಮಾಡಬೇಕು ಎಂಬುದು ಸಿಎಂ ಯಡಿಯೂರಪ್ಪನವರ ಬಹು ದಿನದ ಕನಸಾದ್ದರಿಂದ ಸಂಸದ ರಾಘವೇಂದ್ರ ಇಂದು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.

ರಸ್ತೆ ಕಾಮಗಾರಿ ವೀಕ್ಷಿಸಿದ ಸಂಸದ ಬಿ.ವೈ. ರಾಘವೇಂದ್ರ

ರಾಷ್ಟ್ರೀಯ ಹೆದ್ದಾರಿ‌ ಪ್ರಾಧಿಕಾರದ ಇಂಜಿನಿಯರ್ ಪೀರ್ ಪಾಷರವರು ಸಂಸದರಿಗೆ ಕಾಮಗಾರಿಯ ಪ್ರಗತಿ ಬಗ್ಗೆ ವಿವರಿಸಿದರು. ಹರಕೆರೆಯ ಬಳಿ ತುಂಗಾ ನದಿಗೆ ಸೇತುವೆ ನಿರ್ಮಾಣದ ಕಾಮಗಾರಿ ಭರದಿಂದ ಸಾಗುತ್ತಿದೆ. ಇದೇ ರೀತಿ ಕಾಮಗಾರಿ ನಡೆದರೆ ಮುಂದಿನ ಒಂದು ವರ್ಷದಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಿ. ವೈ. ರಾಘವೇಂದ್ರ ಹೇಳಿದರು. ಅಲ್ಲದೆ ರಿಂಗ್​​​​​​​​ರೋಡ್​​​​​​​ಗಾಗಿ ಭೂಮಿಯನ್ನು ಬಿಟ್ಟು ಕೊಟ್ಟ ರೈತರಿಗೆ ಈ ವೇಳೆ ಧನ್ಯವಾದ ಕೂಡಾ ಅರ್ಪಿಸಿದರು. ರಿಂಗ್​​​​​​​ರೋಡ್​​​​​​​​​ಗಾಗಿ ಸರ್ಕಾರ 810 ಕೋಟಿ ರೂಪಾಯಿ ನಿಗದಿ ಮಾಡಿದೆ. ಅದೇ ರೀತಿ ಜಿಲ್ಲೆಯ ನೀರಾವರಿ ಯೋಜನೆಗಳಿಗೂ ಆದ್ಯತೆ ನೀಡಲಾಗಿದೆ ಎಂದರು. ಈ ವೇಳೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

ರಸ್ತೆ ಕಾಮಗಾರಿ ವೀಕ್ಷಿಸಿದ ಸಂಸದ ಬಿ.ವೈ. ರಾಘವೇಂದ್ರ

ABOUT THE AUTHOR

...view details