ಕರ್ನಾಟಕ

karnataka

ETV Bharat / state

ಪ್ರತಿ ಕಲ್ಲಿನಲ್ಲಿಯೂ ಒಂದೊಂದು ಶಾಸನ ಸಿಗುವ ಭೂಮಿ ನಮ್ಮ ಶಿಕಾರಿಪುರ : ಬಿ ವೈ ರಾಘವೇಂದ್ರ - BY Raghavendra inaugurated the Gandhi Jayanti program in Shikaripur

ಶಾಸ್ತ್ರೀಜಿ ಮತ್ತು ಗಾಂಧೀಜಿಯವರು ನಮ್ಮ ದೇಶದ ಆಸ್ತಿ. ಅವರ ತ್ಯಾಗ ಮತ್ತು ಆದರ್ಶಗಳನ್ನು ತಿಳಿಸುವುದು ಇಂದು ಅವಶ್ಯವಾಗಿದೆ..

Shivamogga
ಗಾಂಧಿ ಜಯಂತಿಯ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಬಿ.ವೈ ರಾಘವೇಂದ್ರ

By

Published : Oct 2, 2021, 8:57 PM IST

ಶಿವಮೊಗ್ಗ : ಪ್ರತಿಯೊಂದು ಕಲ್ಲಿನಲ್ಲಿಯೂ ಒಂದೊಂದು ಶಾಸನ ಸಿಗುವ ಪುಣ್ಯಭೂಮಿ ನಮ್ಮ ಶಿಕಾರಿಪುರ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ಗಾಂಧಿ ಜಯಂತಿಯ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಬಿ ವೈ ರಾಘವೇಂದ್ರ..

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯ ಮಹೋತ್ಸವದ ಪ್ರಯುಕ್ತ ಫಿಟ್ ಇಂಡಿಯಾ ಫ್ರೀಡಂ ರನ್ 2.0 ಮತ್ತು ಗಾಂಧಿ ಜಯಂತಿಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

75ನೇ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವ ಸಲುವಾಗಿ ದೇಶಾದ್ಯಂತ ಫ್ರೀಡಂ ರನ್ ಹಮ್ಮಿಕೊಳ್ಳಲಾಗುತ್ತಿದೆ. ಇದರ ಉದ್ದೇಶ ನಿರಂತರ ಓಟದಿಂದ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳುವುದು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವುದಾಗಿದೆ. ಶಾಸ್ತ್ರೀಜಿ ಮತ್ತು ಗಾಂಧೀಜಿಯವರು ನಮ್ಮ ದೇಶದ ಆಸ್ತಿ. ಅವರ ತ್ಯಾಗ ಮತ್ತು ಆದರ್ಶಗಳನ್ನು ತಿಳಿಸುವುದು ಇಂದು ಅವಶ್ಯವಾಗಿದೆ ಎಂದರು.

ಮಹಾತ್ಮ ಗಾಂಧಿ ಅವರ ಕಲ್ಪನೆಯಂತೆ ಸ್ವಚ್ಛ ಭಾರತ ಹಳ್ಳಿ ಹಳ್ಳಿಗಳಲ್ಲಿಯೂ ವ್ಯಾಪಕವಾಗಿ ತಲುಪಿದೆ. ಸ್ವಚ್ಛ ಭಾರತ್ 2.0 ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ನಮ್ಮ ಊರು ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಆರೋಗ್ಯವಂತ ಗ್ರಾಮಗಳನ್ನು ನಿರ್ಮಾಣ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಎಂ.ಎ.ಡಿ.ಬಿ ಅಧ್ಯಕ್ಷ ಗುರುಮೂರ್ತಿ, ಪುರಸಭೆ ಅಧ್ಯಕ್ಷರಾದ ಲಕ್ಷ್ಮಿ ಮಹಲಿಂಗಪ್ಪ, ತಹಶೀಲ್ದಾರ್ ಕವಿರಾಜ್, ಮುಖ್ಯಾಧಿಕಾರಿ ಸುರೇಶ್, ಶಿಕ್ಷಣಾಧಿಕಾರಿ ಶಶಿಧರ, ಪುರಸಭೆಯ ಸದಸ್ಯರು ಹಾಗು ಸಂಘ ಸಂಸ್ಥೆಯ ಮುಖಂಡರು ಉಪಸ್ಥಿತರಿದ್ದರು.

ABOUT THE AUTHOR

...view details