ಶಿವಮೊಗ್ಗ: ಗಂಡ ಮಾಡಿದ ಸಾಲದಿಂದ ಬೇಸತ್ತ ಮಹಿಳೆ ಮತ್ತು ಆಕೆಯ ಮಗಳು ಒಂದೇ ಸೀರೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಭದ್ರಾವತಿಯ ಸುಭಾಷ್ ನಗರದಲ್ಲಿ ನಡೆದಿದೆ.
ಭದ್ರಾವತಿ ಸುಭಾಷ್ ನಗರ ನಿವಾಸಿ ಧನಶೇಖರ್ ಎಂಬುವರ ಪತ್ನಿ ಸಂಗೀತ(40) ಹಾಗೂ 11 ವರ್ಷದ ಮಗಳು ಆತ್ಮಹತ್ಯೆಗೆ ಶರಣಾದವರು. ಕೊರೊನಾ ಹಿನ್ನೆಲೆ ಧನಶೇಖರ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹೋಲ್ಸೇಲ್ ವ್ಯಾಪಾರ ನಡೆಸುತ್ತಿದ್ದರು. ಆದರೆ, ವ್ಯಾಪಾರದಲ್ಲಿ ನಷ್ಟ ಉಂಟಾಗಿ, ಸುಮಾರು 20 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು.