ಶಿವಮೊಗ್ಗ:ಶಾಲಾ ಕಾಲೇಜುಗಳು ಪ್ರಾರಂಭವಾಗುವ ಹಿನ್ನೆಲೆ, ಕೋವಿಡ್ ಲಸಿಕೆಯನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಹಾಗಾಗಿ ಕಾಲೇಜುಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಇಂದು ಕೋವಿಡ್ ಲಸಿಕೆ ತೆಗೆದುಕೊಳ್ಳಲು ವಿದ್ಯಾರ್ಥಿಗಳು ಮುಗಿಬಿದ್ದಿರುವ ಘಟನೆ ಶಿವಮೊಗ್ಗ ನಗರದ ಕಮಲಾ ನೆಹರು ಕಾಲೇಜಿನಲ್ಲಿ ನಡೆದಿದೆ.
ಶಿವಮೊಗ್ಗ: ಕೋವಿಡ್ ಲಸಿಕೆಗಾಗಿ ಮುಗಿಬಿದ್ದ ವಿದ್ಯಾರ್ಥಿನಿಯರು - shivamogga vaccination news
ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಇಂದು ಒಂದೇ ದಿನ 800 ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಲಾಗುವುದೆಂದು ತಿಳಿಸಲಾಗಿತ್ತು. ಲಸಿಕೆ ತೆಗೆದುಕೊಳ್ಳಲು ಬಂದಿದ್ದ ವಿದ್ಯಾರ್ಥಿನಿಯರು ಸಾಮಾಜಿಕ ಅಂತರವಿಲ್ಲದೇ ಲಸಿಕೆಗೆ ಮುಗಿ ಬಿದ್ದಿದ್ದರು.
ಕೋವಿಡ್ ಲಸಿಕೆಗಾಗಿ ಮುಗಿಬಿದ್ದ ವಿದ್ಯಾರ್ಥಿನಿಯರು
ನಗರದ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಇಂದು ಒಂದೇ ದಿನ 800 ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಲಸಿಕೆ ತೆಗೆದುಕೊಳ್ಳಲು ಬಂದಿದ್ದ ವಿದ್ಯಾರ್ಥಿನಿಯರು ಸಾಮಾಜಿಕ ಅಂತರವಿಲ್ಲದೇ ಲಸಿಕೆಗೆ ಮುಗಿ ಬಿದ್ದಿದ್ದರು. ಸರ್ಕಾರದ ಮಾರ್ಗಸೂಚಿ ಪಾಲಿಸದೇ ಕಾಲೇಜು ಆಡಳಿತವು ಲಸಿಕೆಗೆ ವ್ಯವಸ್ಥೆ ಮಾಡಿರುವುದು ವಿದ್ಯಾರ್ಥಿಗಳು ಮುಗಿ ಬೀಳಲು ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ:ಶಾಲೆಗಳಿಗೂ ತಟ್ಟಿದ ಕೋವಿಡ್ ಎಫೆಕ್ಟ್ : ಮೈದಾನವನ್ನೇ ಗದ್ದೆಯಾಗಿ ಮಾರ್ಪಡಿಸಿದ ಪೋಷಕರು