ಶಿವಮೊಗ್ಗ: ನನ್ನನ್ನು ಬದುಕಿರುವತನಕ ಜೈಲಿಗೆ ಹಾಕಿದರೂ ಪರವಾಗಿಲ್ಲ ಮಥುರಾ, ಕಾಶಿಯಲ್ಲಿನ ಮಸೀದಿಗಳ ಕುರಿತು ನಾನು ನೀಡಿರುವ ಹೇಳಿಕೆಯನ್ನು ಹಿಂಪಡೆಯುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಕಾಶಿ ಹಾಗೂ ಮಥುರಾಗಳು ಮಸೀದಿಯಿಂದ ಮುಕ್ತವಾಗಿ ಪೂರ್ಣ ಪ್ರಮಾಣದಲ್ಲಿ ಹಿಂದೂಗಳ ಶ್ರದ್ಧಾ ಕೇಂದ್ರವಾಗಬೇಕು ಎನ್ನುವ ಕೋಟ್ಯಂತರ ದೇಶ ಭಕ್ತ ಹಿಂದೂಗಳ ಭಾವನೆಯನ್ನು ಹೇಳಿದ್ದೇನೆ. ಆದರೆ ನನ್ನ ಮಾತನ್ನು ಹೈದರಾಬಾದ್ ಸಂಸದ ಓವೈಸಿರವರು ರಾಜಕೀಯಕ್ಕೆ ತಿರುಗಿಸಿದ್ದಾರೆ.
ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ನಾನು ಆರ್ಎಸ್ಎಸ್ನ ಮಾತು ಕೇಳಿ ಈ ಮಾತನ್ನು ಹೇಳಿದ್ದೇನೆ ಎಂದಿದ್ದಾರೆ. ಇದಾದ ನಂತರ ಧರ್ಮ ಸಂಸತ್ ಮಾಡ್ತಾರೆ, ಜನಾಂದೋಲನ ಮಾಡ್ತಾರೆ, ಬಳಿಕ ನಿರ್ಣಯ ಮಾಡ್ತಾರೆ, ಆರ್ಎಸ್ಎಸ್ ಬೈಠಕ್ ಮಾಡ್ತಾರೆ, ಅಂತ ಹೇಳಿದ್ದಾರೆ. ನಾನು ಈ ದೇಶದ ಮಣ್ಣಿನ ಮಗ. ಸ್ವಾತಂತ್ರ ಭಾರತದಲ್ಲಿದ್ದೇನೆ. ಭಾರತೀಯ ಸಂಸ್ಕೃತಿಗೋಸ್ಕರ ಬಲಿದಾನವಾದ ದೇಶವಿದು. ಅವರೆಲ್ಲಾರ ಆಸೆ ಅಂದ್ರೆ, ಭಾರತೀಯರ ಶ್ರದ್ದಾ ಕೇಂದ್ರವಾದ ಅಯೋಧ್ಯೆ, ಮಥುರಾ ಹಾಗೂ ಕಾಶಿಯಲ್ಲಿ ಕೇವಲ ಭಕ್ತಿಯ ಕೇಂದ್ರವಾಗಬೇಕು ಎಂಬುದು. ಇದರಿಂದ ನಾನು ಓವೈಸಿಯ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದರು.
ನನಗೆ ಆಶ್ಚರ್ಯವಾಗಿದ್ದೆಂದರೆ, ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಕ್ಯಾಬಿನೆಟ್ನಿಂದ ತೆಗದು ಹಾಕಿ, ನನ್ನ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು ಎಂಬ ಹೇಳಿಕೆ ನೀಡಿದ್ದಾರೆ. ನನಗೆ ಜೈಲು ಹೊಸದಲ್ಲ. ತುರ್ತು ಸಂದರ್ಭದಲ್ಲಿ ಜೈಲು ನೋಡಿದ್ದೇನೆ. ಈಗ ನನ್ನ ಹೇಳಿಕೆಯಿಂದ ಬಂಧನವಾಗಬೇಕು ಅಂದ್ರೆ. ನಾನು ಜೈಲಿಗೆ ಹೋಗಲು ಸಿದ್ದ ಎಂದರು.