ಶಿವಮೊಗ್ಗ :ಮಲೆನಾಡಲ್ಲಿ ಮಂಗನ ಕಾಯಿಲೆ ಇನ್ನೂ ಜೀವಂತವಾಗಿದೆ. ಇದರಿಂದ ಮಂಗಗಳು ಸತ್ತರೆ ಜನ ಭಯಪಡುವ ವಾತಾವರಣ ಇನ್ನೂ ಇದೆ. ಆದರೆ, ಹೊಸನಗರ ಪಟ್ಟಣದಲ್ಲಿ ಮಂಗಗಳು ಸಾವನ್ನಪಿರುವ ವಿಷಯವನ್ನು ಪಟ್ಟಣ ಪಂಚಾಯತ್‌ಗೆ ತಂದರು ಸಹ ಮಂಗಗಳ ಮೃತ ದೇಹವನ್ನು ಸುಡದೆ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ ತೋರಿದೆ. ಆದರೆ, ಆರೋಗ್ಯ ಕಾರ್ಯಕರ್ತೆ ಹಾಗೂ ನಿವೃತ್ತ ನೌಕರರು ಸೇರಿ ಮಂಗಗಳನ್ನು ಸುಟ್ಟು ತಮ್ಮ ಮಾನವೀಯತೆ ತೋರಿದ್ದಾರೆ.
ಇದನ್ನೂ ಓದಿ:ಜೆಡಿಎಸ್ ಆಗಾಗ ನಮ್ಮ ಹತ್ತಿರ ಬರುತ್ತೆ, ದೂರ ಹೋಗುತ್ತೆ: ಸಿ.ಟಿ.ರವಿ
ಹೊಸನಗರ ಪಟ್ಟಣದಲ್ಲಿ ಎರಡು ಮಂಗಗಳ ಮೃತ ದೇಹ ಪತ್ತೆಯಾಗಿದೆ. ಮಂಗಗಳ ಮೃತ ದೇಹ ಹೊಸನಗರದ ಜನಾರ್ಧನಾ ದೇವಾಲಯದ ಬಳಿ ಪತ್ತೆಯಾಗಿತ್ತು. ಆದರೆ, ಮಂಗಗಳ ಮೃತ ದೇಹ ಪತ್ತೆಯಾಗಿರುವ ಬಗ್ಗೆ ಹೊಸನಗರ ಪಟ್ಟಣ ಪಂಚಾಯತ್ ಗಮನಕ್ಕೆ ತಂದರು ಸಹ ಮಂಗಗಳನ್ನು ಸುಡದೆ ನಿರ್ಲಕ್ಷ್ಯ ತೋರಿದೆ.
ಇದರಿಂದ ಆರೋಗ್ಯ ಕಾರ್ಯಕರ್ತೆ ಜಯಮ್ಮ ಹಾಗೂ ತಾಪಂ ನಿವೃತ್ತ ನೌಕರ ಗಣಪತಿಯವರು ತಾವೇ ಎರಡು ಮಂಗಗಳನ್ನು ಸುಟ್ಟು ಹಾಕಿದ್ದಾರೆ. ನಂತರ ಸುತ್ತಮುತ್ತ ಕ್ರಿಮಿ ನಾಶಕವನ್ನು ಸಿಂಪಡಿಸಿದ್ದಾರೆ. ಈ ಮೂಲಕ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ರೂ ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಾಗಿ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮರೆದಿದ್ದಾರೆ.