ಶಿವಮೊಗ್ಗ: ಮರದಿಂದ ಬಿದ್ದ ಮಂಗವೊಂದು ಸಕಾಲಕ್ಕೆ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಂಡಿರುವ ಘಟನೆ ಭದ್ರಾವತಿ ತಾಲೂಕು ಹುಣಸೆಕಟ್ಟೆ ಜಂಕ್ಷನ್ ಬಳಿ ನಡೆದಿದೆ.
ಮರದಿಂದ ಬಿದ್ದು ಮಂಗ ಸಾವು; ಸ್ಥಳೀಯರಲ್ಲಿ ಮಂಗನ ಕಾಯಿಲೆ ಭೀತಿ - ಶಿವಮೊಗ್ಗ ಸುದ್ದಿ
ಮಂಗವೊಂದು ಮರದಿಂದ ಕೆಳಕ್ಕೆ ಬಿದ್ದು, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಇಂದು ಹುಣಸೆಕಟ್ಟೆ ಜಂಕ್ಷನ್ ರಸ್ತೆ ಪಕ್ಕದಲ್ಲಿದ್ದ ಮರದ ಮೇಲಿಂದ ಮಂಗವೊಂದು ದಿಢೀರನೆ ಕುಸಿದು ಬಿದ್ದಿದೆ. ಈ ವೇಳೆ ಸ್ಥಳದಲ್ಲಿದ್ದ ಫಾರೂಕ್ ಹಾಗೂ ಸ್ನೇಹಿತರು ಮಂಗವನ್ನು ಉಳಿಸಲು ಪಶು ವೈದ್ಯರಿಗೆ ಪೋನ್ ಮಾಡಿದ್ದಾರೆ.
ಆದರೆ ಪಶು ವೈದ್ಯರು ಸರಿಯಾದ ಸಮಯಕ್ಕೆ ಬಂದಿಲ್ಲ. ದಾರಿಯಲ್ಲಿ ಸಾಗುತ್ತಿದ್ದ ವೈದ್ಯರು (ಮಾನವ ಚಿಕಿತ್ಸಾ ವೈದ್ಯರು) ಬಂದು ನೋಡುವಷ್ಟರಲ್ಲಿ ಮಂಗ ಪ್ರಾಣ ಬಿಟ್ಟಿದೆ. ತಕ್ಷಣ ಫಾರೂಕ್ ಹಾಗೂ ಸ್ನೇಹಿತರು ಸಮೀಪದ ಗ್ರಾಮ ಪಂಚಾಯತ್ ತಿಳಿಸಿದ್ದಾರೆ. ಅವರು ಬಂದು ಮಂಗನ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಆದರೆ ಈ ಭಾಗದಲ್ಲಿ ಮಂಗನ ಸಾವು ಸ್ಥಳೀಯರಲ್ಲಿ ಮಂಗನ ಕಾಯಿಲೆಯ ಭೀತಿ ತಂದಿದೆ.