ಶಿವಮೊಗ್ಗ: ಜಿಲ್ಲೆಯ ಮತ್ತೂರು ಮತ್ತು ಹೊಸಹಳ್ಳಿ ಗ್ರಾಮಸ್ಥರು ಏರ್ಪಡಿಸಿದ್ದ ತೆಪ್ಪೋತ್ಸವ ಹಾಗೂ ತುಂಗಾರಾತಿ ಗ್ರಾಮದಲ್ಲಿ ಮೋಹನ್ ಭಾಗವತ್ ಅವರು ಗ್ರಾಮಸ್ಥರ ಆಹ್ವಾನದ ಮೇರೆಗೆ ಆಗಮಿಸಿದ್ದರು. ತುಂಗಾ ನದಿಯಲ್ಲಿ ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರ ತೆಪ್ಪೋತ್ಸವ ನಡೆಯಿತು.
ತುಂಗಾ ಆರತಿಯಲ್ಲಿ ಮೋಹನ್ ಭಾಗವತ್ ಭಾಗಿ... ಹರಕೆ ತೀರಿಸಿದ ಗ್ರಾಮಸ್ಥರು - ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್
ಶಿವಮೊಗ್ಗ ಜಿಲ್ಲೆಯ ಮತ್ತೂರು ಮತ್ತು ಹೊಸಹಳ್ಳಿ ಗ್ರಾಮಸ್ಥರು ಏರ್ಪಡಿಸಿದ್ದ ತೆಪ್ಪೋತ್ಸವ ಹಾಗೂ ತುಂಗಾರಾತಿ ಉತ್ಸವದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗ್ರಾಮಸ್ಥರ ಆಹ್ವಾನದ ಮೇರೆಗೆ ಆಗಮಿಸಿದ್ದರು. ತುಂಗಾ ನದಿಯಲ್ಲಿ ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರ ತೆಪ್ಪೋತ್ಸವ ನಡೆಯಿತು.
ನದಿಯಲ್ಲಿ ದೇವರುಗಳನ್ನು ಅತ್ತಿತ್ತ ಸುತ್ತಾಡಿಸುವ ಮೂಲಕ ತೆಪ್ಪೋತ್ಸವ ಮಾಡಿದರು. ನಂತರ ಮೋಹನ ಭಾಗವತರಿಗೆ ಸಂಸ್ಕೃತ ಗ್ರಾಮಗಳಾದ ಮತ್ತೂರು ಮತ್ತು ಹೊಸಹಳ್ಳಿ ಗ್ರಾಮದ ಬ್ರಾಹ್ಮಣರುಗಳು ಆಶೀರ್ವಾದ ಮಾಡಿದರು. ಗ್ರಾಮಸ್ಥರ ವತಿಯಿಂದ ಆತ್ಮೀಯವಾಗಿ ಸನ್ಮಾನ ಮಾಡಲಾಯ್ತು.
ಅತ್ತ ಮೋಹನ್ ಭಾಗವತರು ಆರತಿ ಮಾಡುತ್ತಿದ್ದಂತೆಯೇ ದಡದಲ್ಲಿದ್ದ ಸಂಸದ ಬಿ ವೈ ರಾಘವೇಂದ್ರ ತಮ್ಮ ಪತ್ನಿ ತೇಜಸ್ವಿನಿ ಜತೆ ತುಂಗಾರಾತಿ ಮಾಡಿದರು. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣದ ಪರ ತೀರ್ಪು ಬಂದರೆ ತುಂಗಾ ನದಿಯಲ್ಲಿ ಶ್ರೀರಾಮನ ತೆಪ್ಪೋತ್ಸವ ಮಾಡುವ ಹರಕೆ ಕಟ್ಟಿಕೊಂಡಿದ್ದ ಈ ಎರಡೂ ಗ್ರಾಮಸ್ಥರು, ಅದರಂತೆ ಇಂದು ಹರಕೆ ತೀರಿಸುವ ಕಾರ್ಯಕ್ರಮಕ್ಕೆ ಮೋಹನ ಭಾಗವತರು ಅತಿಥಿಯಾಗಿದ್ರು. ಇದೇ ವೇಳೆ ಮಾತನಾಡಿದ ಭಾಗವತ್ ಅವರು, ಗ್ರಾಮಸ್ಥರು ಆಶೀರ್ವಾದ ಮಾಡಿರೋದು ತುಂಬ ಸಂತೋಷ. ಕೆಲ ಕಡೆ ಪುಣ್ಯ ಬರುತ್ತದೆ ಎಂದು ಹೇಳುತ್ತಾರೆ. ನಿಮ್ಮಂತವರನ್ನು ನೋಡಿದ್ರೆ ಸಾಕು ನಮ್ಗೆ ಪುಣ್ಯ ಬರುತ್ತದೆ ಎಂದರು.