ಕರ್ನಾಟಕ

karnataka

ಚಾರ್ಜ್​ಗೆ ಇಟ್ಟಿದ್ದ ಮೊಬೈಲ್​ ಸ್ಫೋಟಗೊಂಡು ಬಾಲಕನಿಗೆ ಗಾಯ..

By

Published : May 8, 2020, 10:06 AM IST

ಚಾರ್ಜ್​ಗೆ ಹಾಕಿದ್ದ ವೇಳೆ ಮೋಬೈಲ್​ ಸ್ಫೋಟಗೊಂಡು ಪಕ್ಕದಲ್ಲೇ ಕುಳಿತಿದ್ದ ಬಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.

Mobile blast
ಮೊಬೈಲ್​ ಸ್ಪೋಟ

ಶಿವಮೊಗ್ಗ :ಮನೆಯಲ್ಲಿಚಾರ್ಜ್​ಗೆ ಇಟ್ಟಿದ್ದ ಮೊಬೈಲ್‌ ಸ್ಫೋಟಗೊಂಡು ಬಾಲಕ ಗಾಯಗೊಂಡಿರುವ ಘಟನೆ ಶಿವಮೊಗ್ಗ ತಾಲೂಕು ಸೂಗೂರು ಗ್ರಾಮದಲ್ಲಿ ನಡೆದಿದೆ.

ಸುಗೂರು ಗ್ರಾಮದ ರಾಕೇಶ್ (7) ಬಾಲಕ ಘಟನೆಯಿಂದ ಗಾಯಗೊಂಡಿದ್ದಾನೆ. ಮೊಬೈಲ್​ ಸ್ಫೋಟಗೊಂಡಿದ್ದರಿಂದ ಪಕ್ಕದಲ್ಲೇ ಕುಳಿತಿದ್ದ ಬಾಲಕನ ಮೇಲೆ ಫೋನ್​ ಸಿಡಿದಿದೆ. ಇದರಿಂದ ಆತನ ಮುಖ, ಕೈಗೆ ಗಾಯಗಳಾಗಿವೆ.

ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಕರೆದು‌ ಕೊಂಡು‌ ಹೋಗಿ ಚಿಕಿತ್ಸೆ ಕೊಡಿಸಲಾಗಿದೆ, ಸದ್ಯ ಹೆಚ್ಚಿನ ಯಾವುದೇ ಅಪಾಯವೂ ಆಗಿಲ್ಲ.

ABOUT THE AUTHOR

...view details