ಕರ್ನಾಟಕ

karnataka

ETV Bharat / state

ಶಾಸಕರು ಪತ್ರ ಬರೆದಿರುವುದು ಒಳ್ಳೆಯ ಬೆಳವಣಿಗೆ: ಸಚಿವ ಮಧು ಬಂಗಾರಪ್ಪ - ಸಚಿವ ಮಧು ಬಂಗಾರಪ್ಪ ಸಭೆ

ಮಳೆಯಿಂದ ಉಂಟಾಗಿರುವ ಹಾನಿಯ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗೆ ಸಚಿವ ಮಧು ಬಂಗಾರಪ್ಪ ಇಂದು ಸಭೆ ನಡೆಸಿದರು.

Minister Madhu Bangarappa
ಸಚಿವ ಮಧು ಬಂಗಾರಪ್ಪ

By

Published : Jul 26, 2023, 4:00 PM IST

ಶಾಸಕರು ಪತ್ರ ಬರೆದಿರುವುದು ಒಳ್ಳೆಯ ಬೆಳವಣಿಗೆ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ:ಶಾಸಕರು ಸಚಿವರ ವಿರುದ್ಧ ಪತ್ರ ಬರೆದಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. ಶಾಸಕರಿಗೆ ನಮ್ಮಿಂದ ಅನಾನುಕೂಲ ಆಗಿರುವ ಕುರಿತು ನಾವುಗಳು ಸೂಕ್ತವಾಗಿ ಸ್ಪಂದಿಸಲು ಇದು ಸಹಕಾರಿ ಆಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಾಸಕರು ಪತ್ರ ಬರೆದಿರುವ ಕುರಿತು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿಯಲ್ಲಿ ಇಂದು ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗಿರುವ ಹಾನಿಯ ಕುರಿತು ಜಿಲ್ಲಾ‌ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಅವರು ಮಾತನಾಡಿದರು.

ಶಾಸಕರು ಪತ್ರ ಬರೆದಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಇದನ್ನು ನಾಲ್ಕು ಗೋಡೆಗಳ ನಡುವೆ ಮಾತನಾಡಬೇಕಿತ್ತು. ಶಾಸಕರಿಗೆ ಮಂತ್ರಿಗಳಿಂದ ತೊಂದರೆ ಆಗಿದ್ದರೆ, ಅದನ್ನು ಸರಿಪಡಿಸಲು ಅವಕಾಶ ನೀಡಿದಂತೆ ಆಗುತ್ತದೆ. ನಮ್ಮಿಂದ ಏನಾದರೂ ಸಮಸ್ಯೆ ಉಂಟಾಗಿದ್ದರೆ ಅದನ್ನು ಸರಿಪಡಿಸಬಹುದಾಗಿದೆ ಎಂದರು.

ಸರ್ಕಾರದ ವಿರುದ್ಧ ಸಂಚು ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರದ ವಿರುದ್ಧ ಸಂಚು ನಡೆಸುವುದು ಬಿಜೆಪಿಯವರ ಕೆಲಸವಾಗಿದೆ. ಅವರು ಪ್ರಜಾ ಪ್ರಭುತ್ವಯುತವಾಗಿ ಅಧಿಕಾರಕ್ಕೆ ಬಂದಿಲ್ಲ. ಇನ್ನು ಸಿಂಗಾಪುರದಲ್ಲಿ ಕುಳಿತು ಸರ್ಕಾರ ಉರುಳಿಸುವ ಸುದ್ದಿ, ಇದೆಲ್ಲ ಮಾಧ್ಯಮದರ ಸೃಷ್ಟಿ ಅಷ್ಟೇ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಉನ್ನತ ನಾಯಕರು. ಅವರ ವಿರುದ್ಧ ಯಾರು ಸಹ ಅಸಮಾಧಾನ ಹೊಂದಿಲ್ಲ ಎಂದರು.

ಬಿಜೆಪಿಯವರಷ್ಟು ದಡ್ಡರು ಯಾರೂ ಇಲ್ಲ:ಬಿಜೆಪಿಯವರು ಇಷ್ಟು ದಡ್ಡರಿದ್ದಾರೆ. ಅವರು ಪಠ್ಯ ಪುಸ್ತಕ ಓದಬೇಕಿತ್ತು. ಸೋತವರಿಗೆ, ಜ್ಞಾನವಿಲ್ಲದೇ ಇರುವವರಿಗೆ ನಾನು ಉತ್ತರ ನೀಡಿಲ್ಲ. ಕಪ್ಪು ಬಾವುಟ ಹಿಡಿದುಕೊಂಡು ಬಂದವರೆಲ್ಲಾ ದೊಡ್ಡ ಹೋರಾಟಗಾರರಲ್ಲ ಎಂದು ಕಿಡಿಕಾರಿದರು. ಜಿಲ್ಲಾ ಪಂಚಾಯತ್​ನಲ್ಲಿ ಸಭೆ ನಡೆಸುತ್ತಿರುವ ವೇಳೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಹೋರಾಟಗಾರರ ಪಠ್ಯ ತೆಗೆದಿದ್ದಾರೆ ಎಂದು ಅವರ ಕರಪತ್ರದಲ್ಲಿ ಹಾಕಿದ್ದಾರೆ. ಅವರಿಗೆ ಸರಿಯಾದ ಜ್ಞಾನವಿಲ್ಲ. ಮೊದಲು ಪುಸ್ತಕ ಓದಬೇಕಿತ್ತು. ಅದನ್ನು‌ ಬಿಟ್ಟು ಹೀಗೆ ಪ್ರತಿಭಟನೆ ನಡೆಸಿದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

ಮಳೆ ಹಾನಿಯ ಕುರಿತು ಅಧಿಕಾರಿಗಳ ಸಭೆ ನಡೆಸಲಾಯಿತು. ಮಳೆ, ಹಾನಿ, ಬಿತ್ತನೆ ಕುರಿತು ಮಾಹಿತಿ ಪಡೆದುಕೊಳ್ಳಲಾಯಿತು. ಅಧಿಕಾರಿಗಳ ಕಾರ್ಯಕ್ಕೆ ಇರುವ ಸಮಸ್ಯೆಗಳ ಕುರಿತು ತಿಳಿದುಕೊಂಡರು.

ರಾಜ್ಯದ ಎಲ್ಲ ಡಿಸಿಗಳ ಜೊತೆ ಸಂಜೆ ಸಿಎಂ ವಿಡಿಯೋ ಕಾನ್ಫರೆನ್ಸ್:ರಾಜ್ಯದಲ್ಲಿ ಮಳೆಯಿಂದ ಹಾನಿಯಾಗಿರುವ ಕುರಿತು ಇಂದು ಸಂಜೆ ಸಿಎಂ ಸಿದ್ದರಾಮಯ್ಯ ಎಲ್ಲ ಡಿಸಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮಾಡಲಿದ್ದಾರೆ. ಇಲ್ಲಿ ಜಿಲ್ಲೆಗಳ ಸಮಗ್ರ ಮಾಹಿತಿಯನ್ನು ಅವರು ಪಡೆಯಲಿದ್ದಾರೆ ಎಂದರು.

ಶಾಲಾ ಕಟ್ಟಡಗಳ ದುರಸ್ಥಿಗೆ ಹಣ ಬಿಡುಗಡೆ:ರಾಜ್ಯದ ಶಾಲೆಗಳ ಕಟ್ಟಡಗಳ ದುರಸ್ತಿ ಕುರಿತು ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಆದಷ್ಟು ಬೇಗ ಅದನ್ನು ಶಾಲೆಯ ದುರಸ್ತಿ ಮಾಡಲಾಗುವುದು ಎಂದರು.

ಇದನ್ನೂ ಓದಿ:CM Siddaramaiah: ರಾಹುಲ್ ಗಾಂಧಿ ವಿರುದ್ಧದ ಕ್ರಮ ನಿಮಗೆ ಅನ್ವಯವಾಗುವುದಿಲ್ಲವೇ? ಮೋದಿ ವಿರುದ್ಧ ಸಿದ್ದರಾಮಯ್ಯ ಟೀಕೆ

ABOUT THE AUTHOR

...view details