ಶಿವಮೊಗ್ಗ:ಸುಪ್ರೀಂಕೋರ್ಟ್ನ ದೌರ್ಜನ್ಯ ತಡೆ ಕಾಯ್ದೆ ಜನಪರವಾಗಿದೆ ಎಂದು ಕೊಡಚಿ ಕ್ಷೇತ್ರದ ಶಾಸಕ ಪಿ.ರಾಜೀವ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಿ.ರಾಜೀವ್, ಸುಪ್ರೀಂಕೋರ್ಟ್ನ ದೌರ್ಜನ್ಯ ತಡೆ ಕಾಯ್ದೆ ಕುರಿತು ಪ್ರತಿಕ್ರಿಯಿಸಿ, ನ್ಯಾಯಾಲಯದ ತೀರ್ಪು ಜನಪರ ತೀರ್ಪಾಗಿದೆ. ಕಾನೂನಿನ ದುರುಪಯೋಗವು ಆಗಬಾರದು ಹಾಗೂ ದೌರ್ಜನ್ಯವೂ ನಡಿಯಬಾರದು. ಈ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು ಜನಪರವಾಗಿದೆ ಎಂದರು.
ಅಮಾಯಕರಿಗೆ ತೊಂದರೆ ಆಗುವುದಿಲ್ಲ, ಅಪರಾಧಿಗಳಿಗೆ ಬಚಾವ್ ಆಗುವ ಲಕ್ಷಣವೂ ಕೂಡಾ ಇಲ್ಲ. ಕಾನೂನಿನ ಮೂಲಕ ಅಪರಾಧಿ ತಪ್ಪಿಸಿಕೊಳ್ಳಬಾರದು, ಅಮಾಯಕರು ತೊಂದರೆಗೆ ಬಳಗಾಗಬಾರದೆಂಬ ಅಂಶವನ್ನು ಸುಪ್ರೀಂ ಕೋರ್ಟ್ ಹೇಳಿದೆ ಎಂದರು.
ಇನ್ನು ಪ್ರತಿಪಕ್ಷಗಳು ಈ ತೀರ್ಪನ್ನು ಮರುಪರಿಶೀಲನೆ ಮಾಡಬೇಕು ಎಂದಿದ್ದಾರೆ ಎನ್ನುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರತಿಪಕ್ಷಗಳು ಈ ತೀರ್ಪನ್ನು ಸರಿಯಾಗಿ ಓದಿಲ್ಲ ಅನಿಸುತ್ತದೆ ಎಂದು ಟಾಂಗ್ ನೀಡಿದರು. ಇನ್ನು ಸಿಎಎ ಬಗ್ಗೆಯೂ ಕೂಡಾ ಸಂವಿಧಾನದ ಮೂಲ ಅಂಶಗಳನ್ನು ತಿಳಿದುಕೊಳ್ಳದೇ ಕೇವಲ ಕಾಯ್ದೆಯನ್ನು ವಿರೋಧಿಸುವುದೇ ನಮ್ಮ ಜವಬ್ದಾರಿ ಎಂದು ಕಾಂಗ್ರೆಸ್ ತಿಳಿದುಕೊಂಡಿದೆ ಎಂದು ಆಕ್ರೋಶ ಹೊರ ಹಾಕಿದರು.