ಶಿವಮೊಗ್ಗ:ಅಪಘಾತವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಸಾಗರದ ಶಾಸಕ ಹರತಾಳು ಹಾಲಪ್ಪ ಮಾನವೀಯತೆ ಮೆರೆದಿರುವ ಘಟನೆ ನಡೆದಿದೆ.
ರಸ್ತೆ ಅಪಘಾತ: ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ ಶಾಸಕ ಹಾಲಪ್ಪ - ಶಿವಮೊಗ್ಗ
ಅಪಘಾತ ನಡೆದು ತೀವ್ರವಾಗಿ ಗಾಯಗೊಂಡಿದ್ದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಶಾಸಕ ಹರತಾಳು ಹಾಲಪ್ಪ ಮಾನವೀಯತೆ ಮೆರೆದರು.
![ರಸ್ತೆ ಅಪಘಾತ: ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ ಶಾಸಕ ಹಾಲಪ್ಪ Haratalu halappa](https://etvbharatimages.akamaized.net/etvbharat/prod-images/768-512-12043490-899-12043490-1623041967339.jpg)
ಹಾಲಪ್ಪ
ಸಾಗರದ ಶಾಸಕ ಹರತಾಳು ಹಾಲಪ್ಪನವರು ಇಂದು ಸೊರಬಕ್ಕೆ ಸಾಗುವಾಗ ಸಾಗರ ತಾಲೂಕಿನ ಲಿಂಗದಹಳ್ಳಿ ಕ್ರಾಸ್ ಬಳಿ ಕಾರೊಂದು ರಸ್ತೆ ಪಕ್ಕಕ್ಕೆ ಹೋಗಿ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿದ್ದ ಪಲ್ಲವಿ ಜೈನ್ ಎಂಬುವರಿಗೆ ಗಾಯವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಶಾಸಕ ಹಾಲಪ್ಪ ಸ್ಥಳೀಯರ ನೆರವಿನಿಂದ ಪಲ್ಲವಿ ಜೈನ್ ಅವರನ್ನು ವಾಹನ ವ್ಯವಸ್ಥೆ ಮಾಡಿ ಸಾಗರದ ಆಸ್ಪತ್ರೆಗೆ ಕಳುಹಿಸಿದ್ದಾರೆ.