ಶಿವಮೊಗ್ಗ : ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆಯಲ್ಲಿ ಏಳು ಜನ ವೈದ್ಯರಿದ್ದರೂ ಲಸಿಕೆ ಪಡೆಯಲು ಯಾಕೆ ತಡ ಮಾಡಿದರೂ ಗೊತ್ತಿಲ್ಲ. ಆದರೂ, ಅವರಿಗೆ ಲಸಿಕೆಯ ವ್ಯವಸ್ಥೆ ಮಾಡಲಾಗಿದೆ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ತಿಳಿಸಿದ್ದಾರೆ.
ಸಾಗರದಲ್ಲಿ ಮಾತನಾಡಿದ ಅವರು, ಕಾಗೋಡು ತಿಮ್ಮಪ್ಪನವರ ಮನೆಯಲ್ಲಿ ಏಳು ಜನ ವೈದ್ಯರಿದ್ದಾರೆ. ಅವರ ಬೀಗ, ಬೀಗತಿ, ಮಗಳು, ಅಳಿಯ ಹಾಗೂ ಮೂರು ಜನ ಮೊಮ್ಮಕ್ಕಳು ಕೂಡ ವೈದ್ಯರು. ಇಷ್ಟೆಲ್ಲಾ ಇದ್ದರೂ ಕೋವಿಡ್ ಲಸಿಕೆ ಎರಡನೇ ಡೋಸ್ ಯಾಕೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂಬುವುದು ಗೊತ್ತಿಲ್ಲ.
ಅವರು ಬೇರೆಲ್ಲಾ ವಿಚಾರಕ್ಕೆ ಪೋನ್ ಮಾಡ್ತಾ ಇರ್ತಾರೆ. ಆದ್ರೆ, ಇದಕ್ಕೆ ಯಾಕೆ ಪೋನ್ ಮಾಡಿಲ್ಲ ಎಂದು ಗೊತ್ತಿಲ್ಲ. ಆದರೂ, ಅವರಿಗೆ ಲಸಿಕೆಯ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಹಾಲಪ್ಪ ಹೇಳಿದರು.
ಓದಿ : ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪಗೆ ಸಿಗದ ಕೋವಿಡ್ ಲಸಿಕೆ: ಸರ್ಕಾರದ ವಿರುದ್ಧ ಆಕ್ರೋಶ
ನಿನ್ನೆ ಕಾಗೋಡು ತಿಮ್ಮಪ್ಪನವರು ಎರಡನೇ ಡೋಸ್ ಲಸಿಕೆ ಪಡೆಯಲು ಹೋದಾಗ ಲಸಿಕೆ ಖಾಲಿಯಾಗಿತ್ತು. ನಿತ್ಯ 100 ಡೋಸ್ ಲಸಿಕೆ ಬರುತ್ತದೆ. ಇವರು ಹೋದಾಗ ಖಾಲಿಯಾಗಿದೆ. ಹಾಗಾಗಿ, ಲಸಿಕೆ ಸಿಕ್ಕಿಲ್ಲ. ಅವರಿಗೆ ಲಸಿಕೆ ವ್ಯವಸ್ಥೆ ಮಾಡಲಾಗುವುದು ಎಂದರು.