ಶಿವಮೊಗ್ಗ:ತನ್ನ ದೊಡ್ಡಮ್ಮನ ಮಗನಿಂದಲೇ ಗರ್ಭವತಿಯಾದ ಅಪ್ರಾಪ್ತೆಯೊಬ್ಬಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಿಪ್ಪನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದೊಡ್ಡಮ್ಮನ ಮಗನಿಂದಲೇ ನಿರಂತರ ಅತ್ಯಾಚಾರ: ಗರ್ಭವತಿಯಾಗಿದ್ದ ಬಾಲಕಿ ಆತ್ಮಹತ್ಯೆ! - ಆತ್ಮಹತ್ಯೆ
ದೊಡ್ಡಮ್ಮನ ಮಗನಿಂದಲೇ ನಿರಂತರ ಅತ್ಯಾಚಾರಕ್ಕೊಳಕ್ಕಾಗಿ ಗರ್ಭಿಣಿಯಾಗಿದ್ದ ಅಪ್ರಾಪ್ತ ಬಾಲಕಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.

ಅಪ್ರಾಪ್ತೆ ಆತ್ಮಹತ್ಯೆ
ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ 16 ವರ್ಷದ ಬಾಲಕಿಯೊಂದಿಗೆ ದೊಡ್ಡಮ್ಮನ ಮಗ ದೈಹಿಕ ಸಂಪರ್ಕ ಬೆಳೆಸಿ, ನಿರಂತರ ಆತ್ಯಾಚಾರ ನಡೆಸಿದ್ದ. ಇದರಿಂದ ಬಾಲಕಿ ಗರ್ಭವತಿಯಾಗಿದ್ದಳು. ಇದರಿಂದ ಮನನೊಂದ ಬಾಲಕಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಡೆತ್ ನೋಟ್ನಲ್ಲಿ ತನ್ನ ಸಾವಿಗೆ ದೊಡ್ಡಮ್ಮನ ಮಗನೇ ಕಾರಣ ಎಂದು ಬರೆದಿಟ್ಟು, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಈ ಕುರಿತು ರಿಪ್ಪನ್ಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.