ಶಿವಮೊಗ್ಗ: ಅವಧಿಗೂ ಮುನ್ಮ ಭರ್ತಿಯಾದ ಭದ್ರಾ ಅಣೆಕಟ್ಟೆಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣ ಗೌಡ ಅವರು ಬಾಗಿನ ಅರ್ಪಿಸಿದರು.
ಭದ್ರಾ ಅಣೆಕಟ್ಟೆಗೆ ಆಗಮಿಸಿದ ಸಚಿವ ನಾರಾಯಣ ಗೌಡ ಅವರು ಮೊದಲು ಶಿವನ ದೇವಾಲಯದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿದರು. ನಂತರ ಭದ್ರಾ ನದಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಭದ್ರಾ ಅಣೆಕಟ್ಟೆಗೆ ಬಾಗಿನ ಅರ್ಪಿಸಿದರು. ಈ ವೇಳೆ, ಸಂಸದ ರಾಘವೇಂದ್ರ, ಶಾಸಕರಾದ ರುದ್ರೇಗೌಡ, ಡಿ.ಎಸ್ ಅರುಣ್, ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಸೇರಿದಂತೆ ನೀರಾವರಿ ಇಲಾಖೆಯ ಇಂಜಿನಿಯರ್ಗಳು ಹಾಜರಿದ್ದರು.
ಸಚಿವ ನಾರಾಯಣಗೌಡ ಮಾತನಾಡಿ, ಅವಧಿಗೂ ಮುನ್ನವೇ ಭದ್ರೆ ತುಂಬಿರುವುದು ನಮಗೆಲ್ಲ ಸಂತೋಷ ತಂದಿದೆ. ಮಂಡ್ಯ ಹಾಗೂ ಶಿವಮೊಗ್ಗಕ್ಕೂ ಅವಿನಾಭಾವ ಸಂಬಂಧವಿದೆ. ಮಂಡ್ಯದಲ್ಲಿ ಕಾವೇರಿಗೆ ಬಾಗಿನ ಅರ್ಪಿಸಿ, ಈಗ ಭದ್ರಾ ನದಿಗೂ ಬಾಗಿ ಅರ್ಪಿಸುತ್ತಿರುವುದು ಸಂತಸ ತಂದಿದೆ. ಮಾಜಿ ಸಿಎಂ ಯಡಿಯೂರಪ್ಪ ಆಶೀರ್ವಾದದಿಂದ ನನಗೆ ಬಾಗಿನ ಅರ್ಪಿಸುವ ಪುಣ್ಯ ಬಂದಿದೆ ಎಂದರು.