ಶಿವಮೊಗ್ಗ: ಖ್ಯಾತ ಗಮಕ ಗಾಯಕ ಎಚ್.ಆರ್.ಕೇಶವಮೂರ್ತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಗೌರವ ಲಭಿಸಿದ್ದು, ಇಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅವರು ಸನ್ಮಾನಿಸಿ, ಗೌರವಿಸಿದರು.
ತಾಲೂಕಿನ ಹೊಸಹಳ್ಳಿಯಲ್ಲಿರುವ ಕೇಶವಮೂರ್ತಿ ಅವರ ನಿವಾಸಕ್ಕೆ ಖುದ್ದು ಸಚಿವರು ಭೇಟಿ ನೀಡಿ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದಕ್ಕೆ ಗೌರವಿಸಿ, ಅಭಿನಂದನೆ ಸಲ್ಲಿಸಿದರು. ಈ ವೇಳೆ ಗಮಕ ಗಂಧರ್ವ ಎಂಬ ಹೆಸರು ಪಡೆದಿರುವ ಕೇಶವಮೂರ್ತಿ ಅವರು, ಇಳಿವಯಸ್ಸಿನಲ್ಲೂ ಗಮಕ ರಾಗ ಹಾಡುವ ಮೂಲಕ ಗಮನ ಸೆಳೆದರು.
ಸರ್ಕಾರ ಈ ಕಲೆಗೆ ಪ್ರೋತ್ಸಾಹ ನೀಡಬೇಕು. 60 ವರ್ಷಗಳಿಂದ ನಾನು ಗಮಕ ಗಾಯನ ನಡೆಸುತ್ತಿದ್ದೇನೆ. ಮುಂದಿನ ಪೀಳಿಗೆಗೆ ಇದನ್ನು ತಲುಪಿಸಲು ಬೆಂಬಲ ಬೇಕು ಎಂದು ಕೇಶವಮೂರ್ತಿ ಅವರು ಮನವಿ ಮಾಡಿದರು.