ಶಿವಮೊಗ್ಗ:ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣ ಗೌಡ ಅವರು ಇಂದು ಜಿಲ್ಲಾ ಪ್ರವಾಸ ಕೈಗೊಂಡು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದರು. ಇವರು ಮೊದಲು ಶಿವಮೊಗ್ಗ ನಗರದ ಶೇಷಾದ್ರಿಪುರಂ ಹಾಗೂ ಟ್ಯಾಂಕ್ ಮೊಹಲ್ಲಾದಲ್ಲಿ ಮಳೆಯಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಿದರು. ಅಲ್ಲಿಂದ ಹೊಸನಗರ ತಾಲೂಕಿಗೆ ಭೇಟಿ ನೀಡಿದ ಸಚಿವರು, ಇಲ್ಲಿ ಮಳೆಯಿಂದ ಹಾನಿಗೊಳಗಾದ ಸೇತುವೆಯನ್ನು ವೀಕ್ಷಿಸಿದರು.
ಬಳಿಕ ಸಾಗರ ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಇಲ್ಲಿನ ಬೀಸನಗದ್ದೆಯಲ್ಲಿ ವರದಾ ನದಿಯಿಂದ ಉಂಟಾಗಿರುವ ಬೆಳೆ ಹಾನಿ, ರಸ್ತೆ ಕೊಚ್ಚಿಹೋಗಿರುವುದನ್ನು ವೀಕ್ಷಣೆ ಮಾಡಿದರು.
ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಬಳಿಕ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ 219 ಮನೆಗಳಿಗೆ ಹಾನಿಯಾಗಿದೆ. ಭಾಗಶಃ ಹಾನಿಯಾದ ಮನೆಯ ಮಾಲೀಕರಿಗೆ 10 ಸಾವಿರ ರೂ. ಹಣ ನೀಡಲಾಗುವುದು, ಸಂಪೂರ್ಣವಾಗಿ ಹಾನಿಯಾಗಿದ್ದರೆ ಮನೆಯವರಿಗೆ 1 ಲಕ್ಷ ರೂ.ವನ್ನು ತಕ್ಷಣವಾಗಿ ನೀಡಲಾಗುವುದು. ನಂತರ ಅವರಿಗೆ 5 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಹೇಳಿದರು. ಸಂಪೂರ್ಣ ಬಿದ್ದ ಮನೆಗಳಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡಲಾಗುವುದು. ಜೊತೆಗೆ ಬೆಳೆಹಾನಿಯ ಬಗ್ಗೆ ಸರ್ವೆ ನಡೆಸಲಾಗುತ್ತದೆ. ಮಳೆ ಇನ್ನೂ ಬರುತ್ತಿದೆ. ಇದರಿಂದ ಸಮೀಕ್ಷೆ ನಡೆಸಿದ ಬಳಿಕ ಪರಿಹಾರ ಒದಗಿಸಲಾಗುವುದು. ಪ್ರತಿ ಜಿಲ್ಲೆಗೆ ಪ್ರವಾಹ ಹಾಗೂ ಪರಿಹಾರಕ್ಕಾಗಿ ಸಿಎಂ ಹಣ ನೀಡಿದ್ದಾರೆ ಎಂದು ಇದೇ ವೇಳೆ ಹೇಳಿದರು.
ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಭದ್ರಾ ಜಲಾಶಯದಿಂದ 12 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ : ಭದ್ರಾ ಜಲಾಶಯ ತುಂಬಿದ್ದು, 12 ಸಾವಿರ ಕ್ಯೂಸೆಕ್ ನೀರನ್ನು ಇಂದು ನದಿಗೆ ಬಿಡಲಾಗಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಬಿ ಆರ್ ಪಿ ಯಲ್ಲಿರುವ ಭದ್ರಾ ಜಲಾಶಯದ ನೀರು 183 ಅಡಿಗೆ ತಲುಪಿದೆ. ಅಣೆಕಟ್ಟೆಯು ಗರಿಷ್ಠ 186 ಅಡಿ ಎತ್ತರದಲ್ಲಿದೆ. ಇದರಿಂದಾಗಿ ಜಲಾಶಯದಿಂದ ಒಟ್ಟು 12 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗಿದೆ. ಜಲಾಶಯಕ್ಕೆ ಒಟ್ಟು 54 ಸಾವಿರ ಕ್ಯೂಸೆಕ್ ನೀರು ಒಳ ಹರಿವಿದೆ ಎಂದು ಹೇಳಲಾಗ್ತಿದೆ. ಬಾಳೆಹೊನ್ನೂರು, ಕೊಪ್ಪ ಭಾಗದಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ನದಿಗೆ ನೀರನ್ನು ಬಿಡಲಾಗಿದೆ.
ಇಂದು ಅಣೆಕಟ್ಟಿಗೆ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರು ಡ್ಯಾಂ ಇಂಜಿನಿಯರ್ ಅವರ ಜೊತೆ ಪೂಜೆ ಸಲ್ಲಿಸಿ ಗೇಟ್ ತೆರೆಯುವ ಮೂಲಕ ನದಿಗೆ ನೀರನ್ನು ಬಿಡುಗಡೆ ಮಾಡಿದರು. ನದಿಗೆ ನೀರು ಬಿಡುವುದರಿಂದ ನದಿ ಪಾತ್ರದ ಜನತೆಗೆ ಎಚ್ಚರಿಕೆ ನೀಡಲಾಗಿತ್ತು.
ಭದ್ರಾ ಜಲಾಶಯದಿಂದ 12 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ರಾಜ್ಯದ ಜೀವನಾಡಿಯಾಗಿ ಹರಿಯುತ್ತಿದ್ದಾಳೆ ಭದ್ರೆ: ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಗದಗ, ಕೊಪ್ಪಳ ಸೇರಿದಂತೆ ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಜೀವನಾಡಿಯಾಗಿ ಭದ್ರೆ ಹರಿಯುತ್ತಿದ್ದಾಳೆ. ಸಾವಿರಾರು ಎಕರೆ ಭೂಮಿ ಕೃಷಿ ಭೂಮಿಗೆ ಭದ್ರೆ ನೀರು ಒದಗಿಸುತ್ತಿದ್ದಾಳೆ. ಶಿವಮೊಗ್ಗ ತಾಲೂಕು ಕೊಡ್ಲಿಯಲ್ಲಿ ಭದ್ರೆಯು ತುಂಗಾ ನದಿಗೆ ಸೇರಿ ತುಂಗ-ಭದ್ರಾ ನದಿಯಾಗಿ ಹರಿದು ಮುಂದೆ ಕೃಷ್ಣೆಯನ್ನು ಸೇರಿ ಹಿಂದೂ ಮಹಾಸಾಗರಕ್ಕೆ ಹರಿಯುತ್ತದೆ.
ಓದಿ :ಮುಖ್ಯಮಂತ್ರಿ ಭೇಟಿಯಾಗಲು 750 ಕಿಮೀ ನಡೆಯುತ್ತಿರುವ ವ್ಯಕ್ತಿ.. ಕಾರಣವೇನು?