ಶಿವಮೊಗ್ಗ: ಬಿಜೆಪಿಯವರು ಇಂಟರ್ ನ್ಯಾಷನಲ್ ಇದ್ದಾರೆ. ನಿಜವಾದ ಭಾರತೀಯರನ್ನೇ ಮರೆತಿರುವ ಭಾರತೀಯವರು ಇವರು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, 2023ರ ಚುನಾವಣೆಯಿಂದಲೂ ಇದ್ದನ್ನೆ ಮಾಡಿಕೊಂಡು ಬಂದಿದ್ದಾರೆ. ಇವರಿಗೆ ಭಾವನಾತ್ಮಕದಿಂದ ಉಪಯೋಗ ಇಲ್ಲ. ರಾಮ, ಕೃಷ್ಣನ ಬಿಟ್ಟರು ಈಗ ದೇಶಕ್ಕೆ ನಾಮಕರಣ ಮಾಡುವುದಕ್ಕೆ ಹೊರಟ್ಟಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಷ್ಟು ದಿನ ಏನೂ ತೊಂದರೆ ಇಲ್ಲದೇ ಸುಖವಾಗಿದ್ದೇವೆ ತಾನೇ ಎಂದು ಪ್ರಶ್ನಿಸಿದ ಅವರು, ಇಂಡಿಯನ್ ರಿಪಬ್ಲಿಕ್ ಫೆಡರೇಷನ್ ನಮ್ಮದು. ಇಂಡಿಯನ್ ರಿಪಬ್ಲಿಕ್ ಫೆಡರೇಷನ್ ಸಿಸ್ಟಮ್ ಇದೆ ಅಂತ ಅವರಿಗೆ ಗೂತ್ತಿಲ್ಲ. ಈಗ ಅಧಿಕಾರ ಇದೆ ಎಂದು ಬದಲಾವಣೆ ಮಾಡಿದರೆ ಏನು ಸಿಗುತ್ತದೆ. ಇಂಡಿಯಾವನ್ನು ಭಾರತ ಅಂತ ಬದಲಾಯಿಸಿದರೆ ಜನರೇ ಅವರಿಗೆ ಶಿಕ್ಷೆ ಕೊಡುತ್ತಾರೆ. ಅರ್ಜೆಂಟ್ ಆಗಿ ಎಲೆಕ್ಷನ್ ಮಾಡಲು ತೀರ್ಮಾನ ಮಾಡಿದ್ದಾರೆ, ನಾವಂತೂ ರೆಡಿ ಇದ್ದೇವೆ ಎಂದರು.
ಶಾಸಕ ಆರಗ ಜ್ಞಾನೇಂದ್ರ ಅವರು ಇಂಡಿಯಾ ಎಂಬುದಕ್ಕೆ ಯಾವುದೇ ಹಿನ್ನೆಲೆ ಇಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಆರಗ ಜ್ಞಾನೇಂದ್ರ ರವರಿಗೆ ಎಲ್ಲಿ ಹಿನ್ನೆಲೆ ಇತ್ತು ಎಂದು ಅವರು ತಿಳಿದುಕೊಂಡು ಬರಲಿ ಎಂದು ತಿರುಗೇಟು ನೀಡಿದರು. ಇಷ್ಟು ದಿನ ಇಂಡಿಯಾ ಅಂತ ಇತ್ತಲ್ವಾ ಏನಾದರೂ ತೊಂದರೆ ಆಗಿತ್ತಾ, ನನಗಂತೂ ಏನು ತೊಂದರೆ ಇರಲಿಲ್ಲ ಎಂದರು. ಇಂಡಿಯಾ ಅಂತ ಕ್ರಿಕೆಟ್ನಲ್ಲಿ, ಒಲಿಪಿಂಕ್ಸ್ನಲ್ಲಿ ಹಾಕಿಕೊಂಡು ಓಡಾಡಿದರು. ಮೌಂಟ್ ಎವರೆಸ್ಟ್ ಮೇಲೆ ಇಂಡಿಯಾದ ಫ್ಲ್ಯಾಗ್ ಹಾಕಿದರು. ಈಗ ಚಂದ್ರಯಾನ ಮಾಡಿದ್ದು ಇಂಡಿಯಾ ಅಂತಾನೇ. ಸುಮ್ಮನೆ ಇಲ್ಲದೇ ಇರುವುದನ್ನು ಮಾಡಬಾರದು. ನೀವು ಏನು ಒಳ್ಳೆ ಕೆಲಸ ಮಾಡಿದ್ದಾರೆ ಅದನ್ನು ಹೇಳಿ? ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.