ಶಿವಮೊಗ್ಗ: ದೇಶದಲ್ಲಿ ಸದ್ಯ ಮೂರು ಹಂತದ ಆಡಳಿತ ನಡೆಯುತ್ತಿದ್ದು, ಇದನ್ನು ಎರಡು ಹಂತಕ್ಕೆ ಇಳಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಓದಿ: ಹಾಡಹಗಲೇ ಚಾಕು ತೋರಿಸಿ ಕಳ್ಳತನಕ್ಕೆ ಯತ್ನ... ಅಟ್ಟಾಡಿಸಿ ಹಿಡಿದ ಸ್ಥಳೀಯರು

ಜಿಲ್ಲಾಧಿಕಾರಿಗಳ ಕಾಂಪೌಂಡ್, ಶಿವಮೊಗ್ಗ ತಾಲೂಕು ಪಂಚಾಯತ್ ಆವರಣದಲ್ಲಿ ನೂತನ ತಾಲೂಕು ಪಂಚಾಯತ್ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ದೇಶದಲ್ಲಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಹಂತದಲ್ಲಿ ಆಡಳಿತ ನಡೆಸಲಾಗುತ್ತಿದೆ.
ಈಗ ಎರಡು ಹಂತದ ಆಡಳಿತಕ್ಕೆ ಚಿಂತನೆ ನಡೆದಿದೆ. ಮುಂದಿನ ಅಧಿವೇಶನದಲ್ಲಿ ಎರಡು ಹಂತದ ಆಡಳಿತದ ಬಗ್ಗೆ ಚರ್ಚೆ ನಡೆಸಿ, ಈ ಕುರಿತು ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ತೀರ್ಮಾನ ಏನು ತೆಗದುಕೊಳ್ಳುತ್ತಾರೆ ನೋಡೋಣ ಎಂದರು. ಈ ವೇಳೆ ಎಂಎಲ್ಸಿ ಆಯನೂರು ಮಂಜುನಾಥ್, ಆರ್. ಪ್ರಸನ್ನ ಕುಮಾರ್, ಜಿ.ಪಂ ಸಿಇಓ ಶ್ರೀಮತಿ ವೈಶಾಲಿ ಸೇರಿದಂತೆ ಅನೇಕರು ಹಾಜರಿದ್ದರು.