ಕರ್ನಾಟಕ

karnataka

ETV Bharat / state

ಬಿಜೆಪಿ ದಿಗ್ವಿಜಯ ಸಾಧಿಸುತ್ತಿದ್ದು, ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕಬೇಕಾಗಿದೆ: ಕೆ.ಎಸ್​​. ಈಶ್ವರಪ್ಪ

ಮಸ್ಕಿಯಲ್ಲಿ ಪ್ರಾರಂಭದಿಂದಲೂ ಗೊಂದಲ ಇತ್ತು, ಹಾಗಾಗಿ ಆ ಒಂದು ಸ್ಥಾನ ಕಳೆದುಕೊಂಡಿರುವುದು ನೋವು ತಂದಿದೆ. ಆದರೆ ಬರುವ ದಿನಗಳಲ್ಲಿ ಮಸ್ಕಿಯಲ್ಲಿಯೂ ಸಹ ಗೆಲ್ಲುತ್ತೇವೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

minister-ks-eswarappa
ಕೆ.ಎಸ್​​. ಈಶ್ವರಪ್ಪ

By

Published : May 2, 2021, 3:58 PM IST

ಶಿವಮೊಗ್ಗ:ದೇಶದಲ್ಲಿಕಾಂಗ್ರೆಸ್ ಎಲ್ಲಿದೆ ಎಂದರೆ ಮಸ್ಕಿಯಲ್ಲಿದೆ ಎಂದು ಕಾಂಗ್ರೆಸ್​ನವರು ಹೇಳುವ ಪರಿಸ್ಥಿತಿ ಬಂದಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಕೆ.ಎಸ್​​. ಈಶ್ವರಪ್ಪ

ಓದಿ: ಸಿಎಂ ಪುತ್ರನಿಗೆ ವರ್ಕೌಟ್​ ಆಗದ ಗೆಲುವಿನ ಹ್ಯಾ'ಟ್ರಿಕ್'.. ಮಾರುಹೋಗದ ಮಸ್ಕಿ ಮತದಾರರು..

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕಾರಣಕ್ಕೂ ಬೆಳಗಾವಿಯಲ್ಲಿ ಬಿಜೆಪಿಯನ್ನು ಗೆಲ್ಲಲು ಬಿಡುವುದಿಲ್ಲ ಎಂದು ಕಾಂಗ್ರೆಸ್
ನವರು ಹೇಳುತ್ತಿದ್ದರು. ಬೆಳಗಾವಿಯಲ್ಲೂ ನಾವು ಗೆಲ್ಲುತ್ತೇವೆ, ಅದೇ ರೀತಿ ಬಸವಕಲ್ಯಾಣದಲ್ಲಿ ಕಾಂಗ್ರೆಸ್​ನವರ ಲೆಕ್ಕಾಚಾರ ತಲೆಕೆಳಗಾಗಿದೆ. ಅಲ್ಲಿ ಭಾರತೀಯ ಜನತಾ ಪಾರ್ಟಿ ಗೆಲ್ಲಲಿದೆ ಎಂದರು.

ಮಸ್ಕಿಯಲ್ಲಿ ಪ್ರಾರಂಭದಿಂದಲೂ ಗೊಂದಲ ಇತ್ತು, ಹಾಗಾಗಿ ಆ ಒಂದು ಸ್ಥಾನ ಕಳೆದುಕೊಂಡಿರುವುದು ನೋವು ತಂದಿದೆ. ಆದರೆ ಬರುವ ದಿನಗಳಲ್ಲಿ ಮಸ್ಕಿಯಲ್ಲಿಯೂ ಸಹ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇಡೀ ದೇಶದಲ್ಲಿ ಭಾರತೀಯ ಜನತಾ ಪಾರ್ಟಿ ದಿಗ್ವಿಜಯ ಸಾಧಿಸುತ್ತ ಹೊರಟಿದೆ. ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕಬೇಕಾದ ಪರಿಸ್ಥಿತಿ ಬಂದಿದೆ‌. ದಿನೇ ದಿನೇ ಕಾಂಗ್ರೆಸ್ ದೇಶದಲ್ಲಿ ಕ್ಷೀಣ ಆಗುತ್ತಿದ್ದು, ಭಾರತೀಯ ಜನತಾ ಪಾರ್ಟಿ ಜಯಭೇರಿ ಸಾಧಿಸುತ್ತಿದೆ ಎಂದರು.

ಇವೆಲ್ಲಕ್ಕೂ ಕಾರಣ ನರೇಂದ್ರ ಮೋದಿಯವರ ದೊಡ್ಡ ಅಭಿವೃದ್ಧಿ ಸಾಧನೆ ಹಾಗೂ ಭಾರತೀಯ ಜನತಾ ಪಾರ್ಟಿಯ ಸಂಘಟನೆಯನ್ನು ದೇಶದ ಜನ ಬೆಂಬಲಿಸುತ್ತಿದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ಪ್ರಕರಣವನ್ನು ಏನ್ ಏನೋ ಮಾಡಿದರೋ ಆ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ ಎನ್ನುವುದನ್ನು ಕಾಂಗ್ರೆಸ್ ಒಪ್ಪಿಕೊಳ್ಳಬೇಕು ಎಂದರು.

ಕರ್ನಾಟಕದಲ್ಲಿ ಎಂಪಿ ಕ್ಷೇತ್ರ ಹಾಗೂ ಎರಡು ವಿಧಾನ ಸಭಾ ಕ್ಷೇತ್ರ ಗೆದ್ದೇ ಬಿಟ್ವಿ ಎಂದು ಸೃಷ್ಟಿ ಮಾಡುವ ಪ್ರಯತ್ನ ನಡೆಸಿದರು. ಇವತ್ತು ಒಂದು ಸೀಟಿಗೆ ಕಾಂಗ್ರೆಸ್ ತೃಪ್ತಿ ಪಡೆದುಕೊಳ್ಳಬೇಕು. ಇಡೀ ದೇಶದಲ್ಲಿ ಕಾಂಗ್ರೆಸ್ ಎಲ್ಲಿಯೂ ಇಲ್ಲ, ಕರ್ನಾಟಕದಲ್ಲಿ ಮಸ್ಕಿ ಒಂದು ಗೆದ್ದಿದ್ದೇವೆ ಎಂದು ಡಿಕೆಶಿ ಹಾಗೂ ಸಿದ್ದರಾಮಯ್ಯನವರು ಹೇಳ್ಕೋಬೇಕು ಎಂದು ಟಾಂಗ್ ನೀಡಿದರು.

ABOUT THE AUTHOR

...view details