ಶಿವಮೊಗ್ಗ:ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಬಡವರಿಗೆ ಹಕ್ಕುಪತ್ರ ಕೊಟ್ಟು ಮನೆ ಕಟ್ಟಿಕೊಳ್ಳಲು ಬ್ಯಾಂಕ್ ಸಾಲ ಕೊಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸರ್ಕಾರಿ ನೌಕರ ಭವನದ ಸಭಾಂಗಣದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಆಯೋಜಿಸಿದ್ದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಸ್ವತ್ತಿನ ಹಕ್ಕುಪತ್ರ ವಿತರಿಸುವ ಸಂಬಂಧ ಸಮೀಕ್ಷೆಗಳು ಕೈಗೊಳ್ಳುವ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಓದಿ: ಸಿನಿಮಾ ಮಂದಿರಗಳಲ್ಲಿ ಎಲ್ಲಾ ಆಸನಗಳ ಭರ್ತಿಗೆ ಅವಕಾಶ ನೀಡಲು ಚಿಂತನೆ: ಸಿಎಂ
ಕರ್ನಾಟಕದ ಎಲ್ಲಾ ಕೊಳಚೆ ಪ್ರದೇಶದ ನಿವಾಸಿಗಳಿಗೆ ಸರ್ಕಾರದ ವತಿಯಿಂದ ಹಕ್ಕುಪತ್ರ ನೀಡಲಾಗುತ್ತಿದ್ದು, ಇದಕ್ಕಾಗಿ ಈಗಾಗಲೇ ಸಿದ್ಧತೆ ನಡೆಸಲಾಗುತ್ತಿದೆ. ಹಕ್ಕುಪತ್ರ ಕೊಡುವಾಗ ಯಾವ ದಾಖಲೆಗಳು ಬೇಕು, ಚೆಕ್ಕುಬಂಧಿ ಹೇಗಿರಬೇಕು, ಅರ್ಜಿಗಳು ಹೇಗೆ ತುಂಬಬೇಕು ಎಂಬ ಮಾಹಿತಿಗಳ ಅವಶ್ಯಕತೆ ಇರುತ್ತದೆ.
ಇದಕ್ಕಾಗಿ ಸ್ಲಮ್ ಬೋರ್ಡ್, ಜಿಲ್ಲಾಧಿಕಾರಿ ಕಚೇರಿ, ಪಾಲಿಕೆ ಕಚೇರಿ ಎನ್ಜಿಒ ಸಹಕಾರದೊಂದಿಗೆ ಮಾಹಿತಿ ಸಂಗ್ರಹಿಸಿ ಮಾಹಿತಿ ಸಂಗ್ರಹಕರಿಗೆ ತರಬೇತಿ ಅವಶ್ಯಕತೆ ಇರುವುದರಿಂದ ಈ ತರಬೇತಿ ನೀಡಲಾಗುತ್ತಿದೆ. ಹಾಗಾಗಿ ಮಾಹಿತಿ ಸಂಗ್ರಹ ಅಧಿಕಾರಿಗಳು ಜಾಗ್ರತೆಯಿಂದ ಮಾಹಿತಿ ಪಡೆದು ಹಕ್ಕುಪತ್ರ ನೀಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು. ಜಿಲ್ಲೆಯಲ್ಲಿ 46 ಕೊಳಚೆ ಪ್ರದೇಶಗಳು ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 65 ಕೊಳಚೆ ಪ್ರದೇಶಗಳು ಸೇರಿದಂತೆ 111 ಕೊಳಚೆ ಪ್ರದೇಶಗಳಿವೆ ಎಂದರು.