ಕರ್ನಾಟಕ

karnataka

ETV Bharat / state

ಸಚಿವ ಕೆ.ಎಸ್​. ಈಶ್ವರಪ್ಪ ಕಚೇರಿ ಇರುವ ಕಟ್ಟಡ ಎರಡು ದಿನ ಬಂದ್..! - ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ

ಸಚಿವ ಕೆ.ಎಸ್. ಈಶ್ವರಪ್ಪ ಅವರ ಕಚೇರಿ ಇರುವ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಿಒಪಿ ಕಾರ್ಮಿಕನಿಗೆ ಕೊರೊನಾ ಸೋಂಕು ತಗುಲಿದೆ. ಆದ್ದರಿಂದ ಕಟ್ಟಡವನ್ನು‌ ಎರಡು‌‌ ದಿನ ಬಂದ್ ಮಾಡಲಾಗಿದೆ.

Minister K.S. Eshwarappa's office building is a two-day bund
ಸಚಿವ ಕೆ.ಎಸ್​. ಈಶ್ವರಪ್ಪನವರ‌ ಕಚೇರಿ ಕಟ್ಟಡ ಎರಡು ದಿನ ಬಂದ್

By

Published : Jun 25, 2020, 3:07 PM IST

ಶಿವಮೊಗ್ಗ:ಗ್ರಾಮೀಣಾಭಿವೃದ್ಧಿ ಹಾಗೂ ಶಿವಮೊಗ್ಗ ಜಿಲ್ಲಾ‌ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಕಚೇರಿ ಇರುವ ಕಟ್ಟಡವನ್ನು ಎರಡು‌ ದಿನ ಬಂದ್ ಮಾಡಲಾಗಿದೆ.

ಆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಿಒಪಿ ಕಾರ್ಮಿಕನಿಗೆ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆ, ಆತನನ್ನು ಕೊರೊನಾ ಪರೀಕ್ಷೆಗೆ ಕರೆದು ಕೊಂಡು ಹೋಗಲಾಗಿತ್ತು. ಆ ವ್ಯಕ್ತಿಗೆ ಇದೀಗ ಸೋಂಕು ತಗುಲಿದೆ. ಆದ್ದರಿಂದ ಕಟ್ಟಡವನ್ನು‌ ಎರಡು‌‌ ದಿನ ಬಂದ್ ಮಾಡಲಾಗಿದೆ.

ಸಚಿವ ಕೆ.ಎಸ್​. ಈಶ್ವರಪ್ಪನವರ‌ ಕಚೇರಿ ಇರುವ ಕಟ್ಟಡ ಎರಡು ದಿನ ಬಂದ್

ಹಾಗೂ ಕಟ್ಟಡಕ್ಕೆ ಸಂಪೂರ್ಣವಾಗಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ. ಇದೇ ಕಟ್ಟಡದಲ್ಲಿ ಗ್ರಾಮಾಂತರ ಶಾಸಕ ಅಶೋಕ್‌‌ ನಾಯ್ಕ ಅವರ ಕಚೇರಿ, ಸ್ಮಾರ್ಟ್ ಸಿಟಿ‌, ಕೈಗಾರಿಕೆ ಹಾಗೂ ಪಶು ಸಂಗೋಪನಾ ಇಲಾಖೆಯ ಕಚೇರಿಗಳು ಸಹ ಕಾರ್ಯನಿರ್ವಹಿಸುತ್ತಿವೆ.

ಇದರಿಂದ ಈ ಕಟ್ಟಡಕ್ಕೆ ನೂರಾರು ಜನ ಬಂದು ಹೋಗುವ ಕಾರಣಕ್ಕೆ ಕಟ್ಟಡವನ್ನು ಎರಡು ದಿನ ಬಂದ್ ಮಾಡಿ, ಇಂದು ಮತ್ತು‌ ನಾಳೆ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ.

For All Latest Updates

ABOUT THE AUTHOR

...view details