ಕರ್ನಾಟಕ

karnataka

ETV Bharat / state

'ದೇಶಭಕ್ತ ಹರ್ಷನ ಮನೆಗೆ ಬಂದು ಸಾಂತ್ವನ ಹೇಳುವಷ್ಟು ಪುರುಸೊತ್ತು ಕಾಂಗ್ರೆಸ್‌ ನಾಯಕರಿಗೆ ಇಲ್ಲ' - ಭಜರಂಗದಳ ಕಾರ್ಯಕರ್ತನ ಹತ್ಯೆ

ಭಜರಂಗದಳ ಕಾರ್ಯಕರ್ತನನ್ನು ಹತ್ಯೆ ಮಾಡಿದವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್ ಈಶ್ವರಪ್ಪ
ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್ ಈಶ್ವರಪ್ಪ

By

Published : Feb 24, 2022, 7:31 AM IST

ಶಿವಮೊಗ್ಗ: ಮಂಡ್ಯದಲ್ಲಿ ಅಲ್ಲಾಹು ಅಕ್ಬರ್‌ ಘೋಷಣೆ ಕೂಗಿದ ಹೆಣ್ಮಗಳಿಗೆ ಕಾಂಪಿಟೇಶನ್‌ನಲ್ಲಿ ಹೋಗಿ ದುಡ್ಡು ಕೊಡ್ತಾರೆ. ಅವರು ಕೊಡಲಿ ಬೇಡ ಅನ್ನಲ್ಲ. ಆದ್ರೆ, ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಹರ್ಷನ ಮನೆಗೆ ಯಾರಾದ್ರೂ ಕಾಂಗ್ರೆಸ್‌ ಮುಖಂಡರು ಭೇಟಿ ನೀಡಿದ್ರಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

ಹರ್ಷನ ಹತ್ಯೆ ಮಾಡಿದವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತದೆ. ದೇಶದ್ರೋಹಿ ಸಂಘಟನೆಗಳು ಈ ರೀತಿಯ ಕೃತ್ಯ ಮಾಡುತ್ತಿವೆ. ಹಾಗಾಗಿ, ರಾಜ್ಯದಲ್ಲಿ ಜನರು ಶಾಂತಿಯುತವಾಗಿ ಇರಬೇಕು ಎಂದು ಅವರು ಇದೇ ವೇಳೆ ಮನವಿ ಮಾಡಿದರು.

ಹರ್ಷನ ಅಂತಿಮ ಯಾತ್ರೆ ವೇಳೆ ಗಾಯಗೊಂಡಿದ್ದ ಯುವಕರ ಆರೋಗ್ಯ ವಿಚಾರಿಸಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್ ಈಶ್ವರಪ್ಪ

ಶಿವಮೊಗ್ಗದಲ್ಲಿ ಹರ್ಷನ ಮೃತದೇಹದ ಅಂತಿಮ ಯಾತ್ರೆ ವೇಳೆ ಗಲಭೆ ಮಾಡಿದವರು ಯಾರು?, ಶಿವಮೊಗ್ಗದವರಾ ಅಥವಾ ಹೊರಗಿನವರಾ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅಶಾಂತಿ ಸೃಷ್ಠಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ.

ಡಿ.ಕೆ.ಶಿವಕುಮಾರ್​ ಅವರು ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ಮುಸ್ಲಿಂ ಗುಂಡಾಗಳು ಅಂದ್ರೆ ಕಾಂಗ್ರೆಸ್​ನವರಿಗೆ ಯಾಕೆ ಸಿಟ್ಟು ಬಂತು ಎನ್ನುವುದು ಗೊತ್ತಿಲ್ಲ. ಹತ್ಯೆ ಮಾಡಿದ ಮುಸಲ್ಮಾನ್​ ಗುಂಡಾಗಳನ್ನು ದೇಶ ಭಕ್ತರು ಅನ್ನೋಕಾಗುತ್ತಾ? ಎಂದು ಹೇಳಿದರು

ಸಚಿವರು, ಸಂಸದರು ಕಾರ್ಯಕರ್ತನ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿ ಗಲಾಟೆ ಮಾಡಿಸಿದ್ದಾರೆ ಎಂದು ಕಾಂಗ್ರೆಸ್​ನವರು ಹೇಳುತ್ತಿದ್ದಾರೆ. ಆದರೆ ನಾವು ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದು, ಗಲಾಟೆ ಮಾಡದಂತೆ ತಡೆಯಲು. ಸುಳ್ಳು ಹೇಳುವ ಕಾಂಗ್ರೆಸ್ ದೇಶದಲ್ಲಿರುವುದೇ ನೋವು.

ಅಲ್ಲಾವು ಅಕ್ಬರ್ ಎನ್ನುವ ಹುಡುಗಿ ಮನೆಗೆ ಭೇಟಿ ನೀಡಿ ಬಹುಮಾನ ನೀಡುವ ಕಾಂಗ್ರೆಸ್ ನಾಯಕರಿಗೆ ದೇಶಭಕ್ತ ಹರ್ಷನ ಮನೆಗೆ ಬರುವಷ್ಟು ಪುರುಸೊತ್ತು ಸಹ ಇಲ್ಲದಾಗಿದೆ ಎಂದು ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ABOUT THE AUTHOR

...view details