ಕರ್ನಾಟಕ

karnataka

ETV Bharat / state

ಮುಂಜಾಗ್ರತೆ ತೆಗೆದುಕೊಂಡು ಶಾಲೆ ಪ್ರಾರಂಭ ಮಾಡಲಾಗುತ್ತಿದೆ: ಕೆ.ಎಸ್​.ಈಶ್ವರಪ್ಪ - ಜಾಗೃತಿ ತೆಗೆದುಕೊಂಡು ಶಾಲೆ ಪ್ರಾರಂಭ ಮಾಡಲಾಗುತ್ತಿದೆ ಕೆ. ಎಸ್​. ಈಶ್ವರಪ್ಪ

ನಾವು ಕಾಟಾಚಾರಕ್ಕೆ ಶಾಲೆ ತೆರೆಯುತ್ತಿಲ್ಲ. ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಶಾಲೆ ಪ್ರಾರಂಭ ಮಾಡಲಾಗಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಬಂದಿರುವುದು‌ ನೋಡಿದರೆ ವಿದ್ಯಾರ್ಥಿಗಳಿಗೆ ಎಷ್ಟು ಅನುಕೂಲವಾಗುತ್ತದೆ ಎಂದು ತಿಳಿದು ಬರುತ್ತದೆ ಎಂದು ಕೆ. ಎಸ್​. ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ
ಶಿವಮೊಗ್ಗದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

By

Published : Aug 23, 2021, 3:55 PM IST

ಶಿವಮೊಗ್ಗ: ಕೊರೊನಾ ಸಂದರ್ಭದಲ್ಲಿ ಎಷ್ಟು ಜಾಗೃತಿ ತೆಗೆದುಕೊಳ್ಳಬೇಕು ಅಷ್ಟು ಜಾಗೃತಿ ತೆಗೆದುಕೊಂಡು ಶಾಲೆ ಪ್ರಾರಂಭ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಸಹ ಅಷ್ಟೇ ಅತ್ಯಂತ ಉತ್ಸಾಹದಿಂದ ಶಾಲೆಗೆ ಆಗಮಿಸುತ್ತಿದ್ದಾರೆ. ಕಾಟಾಚಾರಕ್ಕೆ ಶಾಲೆ ತೆರೆದಿಲ್ಲ ಪೋಷಕರು ಸಹ ಮಕ್ಕಳು ಅತ್ಯಂತ ಉತ್ಸಾಹದಿಂದ ಕಳುಹಿಸುತ್ತಿದ್ದಾರೆ. ಶಾಲೆಗಳ ಎಲ್ಲ ಕೊಠಡಿಗಳನ್ನು ಸ್ಯಾನಿಟೈಸ್​ ಮಾಡಲಾಗಿದೆ. ತರಗತಿಯಲ್ಲಿ ಒಂದು ಬೆಂಚ್​​​ಗೆ ಇಬ್ಬರು ವಿದ್ಯಾರ್ಥಿಗಳನ್ನು ಕೂರಿಸಲಾಗುತ್ತಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ .

ಶಿವಮೊಗ್ಗದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

ಇಂದಿನಿಂದ ಶಾಲಾ ಕಾಲೇಜುಗಳು ಆರಂಭವಾಗಿದ್ದು, ನಗರದ ಸರ್ಕಾರಿ ಬಾಲಕೀಯರ ಕಾಲೇಜಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಸಚಿವ ಕೆ.ಎಸ್​ ಈಶ್ವರಪ್ಪ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಒಳ್ಳೆಯ ಕೆಲಸ ಮಾಡುತ್ತಿದೆ. ಇದು ಸಂತಸಕ್ಕೆ ಕಾರಣವಾಗಿದೆ. ಮೊದಲನೇ ದಿನ ಹೆಚ್ಚು ಮಕ್ಕಳು ಶಾಲೆಗೆ ಆಗಮಿಸುತ್ತಿದ್ದಾರೆ. ಇದನ್ನು ನೋಡಿ ಸಂತಸವಾಗಿದೆ. ಗಾಬರಿಯಿಂದ ಏನಾಗುತ್ತೂ ಅಂತ ಪೋಷಕರು ಹಾಗೂ ವಿದ್ಯಾರ್ಥಿಗಳು ಇಂದು ಬಾರದೇ ಹೋದರೂ ನಾಳೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾವು ಕಾಟಾಚಾರಕ್ಕೆ ಶಾಲೆ ತೆರೆಯುತ್ತಿಲ್ಲ. ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಶಾಲೆ ಪ್ರಾರಂಭ ಮಾಡಲಾಗಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಬಂದಿರುವುದು‌ ನೋಡಿದರೆ ವಿದ್ಯಾರ್ಥಿಗಳಿಗೆ ಎಷ್ಟು ಅನುಕೂಲವಾಗುತ್ತದೆ ಎಂದು ತಿಳಿದು ಬರುತ್ತದೆ ಎಂದರು.

ಶಾಲೆ ಆರಂಭಕ್ಕೂ ಮುನ್ನ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ ಬರ ಮಾಡಿಕೊಂಡರು. ಈ ವೇಳೆ, ಜಿ.ಪಂ. ಸಿಇಒ ಶ್ರೀಮತಿ ವೈಶಾಲಿ,‌ ಡಿಡಿಪಿಐ ರಮೇಶ್ , ಡಿಡಿಪಿಯು ನಾಗರಾಜ್ ಸೇರಿ ಇತರರು ಹಾಜರಿದ್ದರು.

ಇದನ್ನೂ ಓದಿ : ಕುರುಕುರೆ ಫ್ಯಾಕ್ಟರಿಯಲ್ಲಿ ಸಿಲಿಂಡರ್ ಸ್ಫೋಟ.. ಇಬ್ಬರ ಸಾವು

ABOUT THE AUTHOR

...view details