ಶಿವಮೊಗ್ಗ: ಅವಕಾಶವಾದ ರಾಜಕಾರಣಕ್ಕೆ ಇನ್ನೊಂದು ಹೆಸರು ಸಿದ್ದರಾಮಯ್ಯ ಹಾಗೂ ಸಿ ಎಂ ಇಬ್ರಾಹಿಂ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಸಿ ಎಂ ಇಬ್ರಾಹಿಂ ಇಬ್ಬರು ಒಂದೇ. ಇಬ್ರಾಹಿಂ ಅವರು ವಿರೋಧ ಪಕ್ಷ ಸ್ಥಾನ ಸಿಗಲಿಲ್ಲ ಎಂದು ಕಾಂಗ್ರೆಸ್ ತೊರೆದು ಜೆಡಿಎಸ್‍ಗೆ ಹೋಗುತ್ತಿದ್ದಾರೆ.
ಅದೇ ರೀತಿ ಸಿದ್ದರಾಮಯ್ಯ ಅವರೂ ಅಷ್ಟೇ.. ವಿಪಕ್ಷ ನಾಯಕನ ಸ್ಥಾನ, ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಅಂದರೆ ಅವರು ಸಹ ಪಕ್ಷದಲ್ಲಿ ಇರುವುದಿಲ್ಲ. ಇಬ್ಬರೂ ಅವಕಾಶವಾದಿ ರಾಜಕಾರಣಿಗಳು ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಹಾಗೂ ಸಿ ಎಂ ಇಬ್ರಾಹಿಂ ವಿರುದ್ಧ ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿರುವುದು.. ಜಿಪಂ ಹಾಗೂ ತಾಪಂ ಚುನಾವಣೆ ಅದಷ್ಟು ಬೇಗ ನಡೆಸುತ್ತೇವೆ :ತಾಪಂ ಮತ್ತು ಜಿಪಂ ಚುನಾವಣೆಯನ್ನ ಆದಷ್ಟು ಬೇಗ ನಡೆಸಬೇಕು ಎಂದು ಸರ್ಕಾರ ಚಿಂತಿಸಿದೆ. ಚುನಾವಣೆ ನಡೆಸಿ ಅಂತಾ ಆಯೋಗಕ್ಕೆ ಮನವಿ ಸಲ್ಲಿಸಿದ್ದೇವೆ. 780 ತಕರಾರು ಅರ್ಜಿ ಬಂದಿತ್ತು.
ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮೀಸಲಾತಿಯ ಬಗ್ಗೆ ಅನೇಕರು ತಕರಾರು ಅರ್ಜಿ ಸಲ್ಲಿಸಿದ್ದರು. ಇದರಿಂದ ಈಗ ಸಮಿತಿ ರಚನೆ ಮಾಡಲಾಗಿದೆ. ಲಕ್ಷ್ಮಿ ನಾರಾಯಣ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ವರದಿ ಬಂದ ನಂತರ ಕ್ರಮ ತೆಗೆದು ಕೊಳ್ಳುತ್ತೇವೆ. ನಂತರ ಚುನಾವಣೆ ನಡೆಸುತ್ತೇವೆ ಎಂದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ