ಕರ್ನಾಟಕ

karnataka

By

Published : Jul 21, 2021, 3:45 PM IST

ETV Bharat / state

ಎಲ್ಲರೂ ಬಾಯಿ ಮುಚ್ಚಿಕೊಂಡಿದ್ರೆ ರಾಜ್ಯ ರಾಜಕೀಯ ಗೊಂದಲ ಸರಿಹೋಗುತ್ತದೆ: ಸಚಿವ ಈಶ್ವರಪ್ಪ

ಸಿಎಂ ಬದಲಾವಣೆ ಹಾಗೂ ರಾಜಕೀಯ ಗೊಂದಲಗಳ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು. ಈ ವೇಳೆ ತಮ್ಮ ಪಕ್ಷದ ನಾಯಕರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ರು.

ಕೆಎಸ್ ಈಶ್ವರಪ್ಪ
Minister KS Eshwarappa

ಶಿವಮೊಗ್ಗ:ಸಿಎಂ ಬದಲಾವಣೆ ಹಾಗೂ ರಾಜಕೀಯ ಗೊಂದಲಗಳ ಬಗ್ಗೆ ಯಾರು ಮಾತನಾಡದೆ ಹೋದರೆ ಸ್ವಲ್ಪ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸ್ವ ಪಕ್ಷದವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಏನು ಮಾಡಬೇಕೆಂದು ರಾಷ್ಟ್ರೀಯ ನಾಯಕರುಗಳು ಒಂದು ತೀರ್ಮಾನ ತೆಗೆದುಕೊಂಡಿದ್ದರು‌. ಪಕ್ಷದ ರಾಷ್ಟ್ರೀಯ ನಾಯಕ ಅರುಣ್ ಸಿಂಗ್ ಬಂದು ಎಲ್ಲರ ಅಭಿಪ್ರಾಯ ಪಡೆದು ರಾಷ್ಟ್ರೀಯ ನಾಯಕರ ಗಮನಕ್ಕೆ ತಂದರೂ ಸಹ ತಲಾ ಒಬ್ಬೂಬ್ಬರು ಮಾತನಾಡುವುದು ಸರಿಯಲ್ಲ. ಇದು ಸರ್ಕಾರಕ್ಕೂ ಮತ್ತು ಪಕ್ಷಕ್ಕೂ ಒಳ್ಳೆಯದಲ್ಲ. ಹೈಕಮಾಂಡ್​ ತೀರ್ಮಾನಕ್ಕೆ ನಾವು ಬದ್ಧ ಎಂದರು.

ಸಿಎಂ ರಿಂದ ಸ್ಪಷ್ಟನೆ :

ನಿನ್ನೆ ಅನೇಕ ಸ್ವಾಮಿಜೀಗಳು ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ್ದರು. ಈ ವೇಳೆ ಕೇಂದ್ರೀಯ ನಾಯಕರು ತೆಗೆದುಕೊಂಡ ತೀರ್ಮಾನಕ್ಕೆ ಬದ್ಧ ಅಂತಾ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇದರಿಂದ ಯತ್ನಾಳ್ ಸೇರಿದಂತೆ ಯಾರು ಮಾತನಾಡದೆ ಬಾಯಿ ಮುಚ್ಚಿಸಿಕೊಂಡು ಇದ್ದರೆ ಎಲ್ಲವೂ ಸರಿಯಾಗುತ್ತದೆ. ಇದು ರಾಜ್ಯದ ಹಿತಕ್ಕೆ ಅನುಕೂಲವಾಗುತ್ತದೆ ಎಂದು ಸಚಿವ ಈಶ್ವರಪ್ಪ ಹೇಳಿದ್ರು.

ಬಿಜೆಪಿಯಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ:

ಎರಡು ವರ್ಷದ ಸಾಧನೆಯ ಬಗ್ಗೆ ರಾಜ್ಯದ ಜನ ಸಂತೋಷಗೊಂಡಿದ್ದಾರೆ. ಹಿಂದೆ ಎಂದೂ ಆಗದಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಸ್ವಲ್ಪ ರಾಜಕೀಯ ಗೊಂದಲಗಳಿರುವುದರಿಂದ ಅಭಿವೃದ್ಧಿ ಕಾರ್ಯಗಳು ರಾಜ್ಯದ ಜನತೆಗೆ ಮರೆತ ರೀತಿ ಆಗುತ್ತದೆ. ಆದ್ದರಿಂದ ಎರಡು ವರ್ಷದ ಏನ್ ಅಭಿವೃದ್ಧಿ ಮಾಡಿದ್ದೇವೆ ಅಂತಾ ತೋರಿಸಲು ಬ್ಯಾಂಕ್ವೆಟ್ ಹಾಲ್​ನ​ಲ್ಲಿ ಕಾರ್ಯಕ್ರಮವನ್ನು‌ ಸೋಮವಾರ ನಡೆಸುತ್ತೇವೆ. ಹಿಂದಿನ ದಿನ ಭಾನುವಾರ ಸಿಎಂ, ಶಾಸಕರಿಗೆ ಸಂತೋಷಕೂಟ ಇಟ್ಟುಕೊಂಡಿದ್ದಾರೆ ಎಂದು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ

ಪೂರ್ಣ ಬಹುಮತ ಬಂದಿದ್ರೆ ಗೊಂದಲ ಇರುತ್ತಿರಲಿಲ್ಲ:

ನಮ್ಮ ಬಿಜೆಪಿಗೆ ಪೂರ್ಣ ಬಹುಮತ ಬಂದಿದ್ರೆ, ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ.104 ಸೀಟುಗಳು ಬಂದಿವೆ. ಮುಂದೆ ಪೂರ್ಣ ಬಹುಮತ ಪಡೆಯುವ ನಿಟ್ಟಿನಲ್ಲಿ ಗಮನಹರಿಸುವುದು ಒಳ್ಳೆಯದು. ಈ ನಿಟ್ಟಿನಲ್ಲಿ ಶ್ರಮ ಹಾಕಿದ್ರೆ ಬಹುಮತ ಪಡೆಯಬಹುದಾಗಿದೆ. ಈಗ 104 ಇದೆ ಮುಂದೆ 107 ಸ್ಥಾನ ಬರಬಹುದು.‌ ಆದರೆ ಪೂರ್ಣ ಬಹುಮತ ಸಿಕ್ಕಲ್ಲ. ಮತ್ತೆ ಇದೇ ಸಮಸ್ಯೆ ಬರುತ್ತದೆ. ಇದರಿಂದ ನಾವು ಸರ್ಕಾರ ಮಾಡಲು ಆಗಲ್ಲ. ಹಿಂದೆ ಜೆಡಿಎಸ್ ಜೊತೆ ಹೋಗಿದ್ವಿ. ಈಗ ಕಾಂಗ್ರೆಸ್​ನ ಶಾಸಕರು ನಮ್ಮ ಪಕ್ಷಕ್ಕೆ ಬಂದು ಗೆದ್ದ ನಂತರ ಸರ್ಕಾರ ರಚನೆ ಮಾಡಿದ್ದೇವೆ. ಇವತ್ತು ಅಸಮಾಧಾನ ಇರುವವರು ಪಕ್ಷದ ಮೇಲೆ ಗೌರವವಿದ್ರೆ ಮುಂದೆ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಗೊಂದಲಗಳನ್ನು ದಯವಿಟ್ಟು ಮಾಡಬೇಡಿ ಎಂದು ಈಶ್ವರಪ್ಪ ಮನವಿ ಮಾಡಿದರು.

ಜಿ.ಪರಮೇಶ್ವರ್ ಕಾಂಗ್ರೆಸ್​​​ನಲ್ಲಿ ಇರ್ತಾರಾ:

ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್​​ರವರು ಕಾಂಗ್ರೆಸ್​​ನಲ್ಲಿಯೇ ಇರ್ತಾರೆ ಅನ್ನೂದೇ ಡೌಟ್ ಆಗಿದೆ. ಪರಮೇಶ್ವರರನ್ನು ಸೋಲಿಸಿದ್ದು ಸಿದ್ದರಾಮಯ್ಯ, ಸಿದ್ದರಾಮಯ್ಯರವರ‌ನ್ನು ಸೋಲಿಸಿದ್ದು ಪರಮೇಶ್ವರ್. ಇವರು ಹೊಂದಾಣಿಕೆ ಮಾಡಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಮುಳುಗುತ್ತಿರುವ ಹಡುಗನ್ನು ಹತ್ತಿದ್ರೆ ಆ ಶಾಸಕರು ಮುಳುಗಿ ಸಾಯುತ್ತಾರೆ ಎಂದು ಬಿಜೆಪಿ ಶಾಸಕರು ನಮ್ಮ ಜೊತೆ ಇದ್ದಾರೆ ಎಂಬ ಪರಮೇಶ್ವರ್ ಹೇಳಿಕೆಗೆ ತಿರುಗೇಟು ‌ನೀಡಿದ್ರು.‌

ಸಿದ್ದು, ಡಿಕೆಶಿಗೆ ಹೈ ಕಮಾಂಡ್​ ಛೀಮಾರಿ:

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರು ದೆಹಲಿಗೆ ಯಾಕ್ ಹೋಗಿದಾರೆ. ಇನ್ನೂ ಚುನಾವಣೆಗೆ ಎರಡು ವರ್ಷವಿದೆ. ನಿಮ್ಮ ಹಿಂಬಾಲಕರ ಮೂಲಕ ಮುಂದಿನ ಸಿಎಂ ಎಂದು ಘೋಷಣೆ ಹಾಕಿಕೊಳ್ಳಬೇಡಿ ಎಂದು ಹೈ ಕಮಾಂಡ್ ಛೀಮಾರಿ ಹಾಕಿ ಕಳುಹಿಸಿದೆ. ಹಿಂದಿನ ಸರ್ಕಾರವನ್ನು ಯಾಕೆ ಕಳೆದುಕೊಂಡಿರಿ, ಲಿಂಗಾಯತರನ್ನು ಒಡೆಯುವ ಪ್ರಯತ್ನ ಮಾಡಿದ್ರಿ, ಗೋ ಹತ್ಯೆ ಮಾಡುವವರಿಗೆ ಬೆಂಬಲ ನೀಡಿದ್ರಿ, ಇದರಿಂದ ರಾಜ್ಯದ ಜನ ಛೀಮಾರಿ ಹಾಕಿ ಹೊರ ಹಾಕಿದರು. ಇಷ್ಟಾದರೂ ನಿಮಗೆ ಬುದ್ಧಿ ಬರಲಿಲ್ಲವೆ ಎಂದು ಸಚಿವ ಈಶ್ವರಪ್ಪ ಕಿಡಿಕಾರಿದರು.

ಓದಿ: ಸಿಎಂ ಭೇಟಿ ಮಾಡಿದ ಸಿದ್ಧಗಂಗಾ ಶ್ರೀ.. ಬಿಎಸ್​ವೈ ಜೊತೆ ಮಹತ್ವದ ಚರ್ಚೆ

ABOUT THE AUTHOR

...view details