ಶಿವಮೊಗ್ಗ:ರಾಷ್ಟ್ರೀಯ ಆರೋಗ್ಯ ಮಿಷನ್ನಿಂದ ಪ್ರಶಂಸೆಗೆ ಒಳಗಾಗಿರುವ ಶಿವಮೊಗ್ಗದ ಆಶಾ ಕಾರ್ಯಕರ್ತೆ ಅನ್ನಪೂರ್ಣರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪನವರು ಸನ್ಮಾನಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಪ್ರಶಂಸೆ ಪಡೆದ ಆಶಾ ಕಾರ್ಯಕರ್ತೆಗೆ ಈಶ್ವರಪ್ಪ ಸನ್ಮಾನ - Asha activist Annapurna
ಕೋವಿಡ್‌ನಂತಹ ಸಂಕಷ್ಟದಲ್ಲಿ ಅನ್ನಪೂರ್ಣರವರು ಜಗ್ಗದೆ ಹೆದರದೆ ಕೆಲಸ ಮಾಡಿದ್ದಾರೆ. ಅವರಿಗೆ ನಾವು ಎಷ್ಟು ಅಭಿನಂದನೆ ಸಲ್ಲಿಸಿದರೂ ಸಹ ಸಾಲದು..
ರಾಷ್ಟ್ರಮಟ್ಟದಲ್ಲಿ ಪ್ರಶಂಸೆ ಪಡೆದ ಆಶಾ ಕಾರ್ಯಕರ್ತೆಗೆ ಈಶ್ವರಪ್ಪ ಸನ್ಮಾನ
ತಮ್ಮ ಕಚೇರಿಯಲ್ಲಿ ಸನ್ಮಾನ ಮಾಡಿದ ಸಚಿವರು, ಪರಿಶ್ರಮ ಪಟ್ಟರೆ, ಅವರಿಗೆ ಬೆಲೆ ಇದ್ದೇ ಇದೆ. ಅನ್ನಪೂರ್ಣರವರ ಕಾರ್ಯ ನಿಜಕ್ಕೂ ಮೆಚ್ಚುವಂತದ್ದಾಗಿದೆ. ಕೋವಿಡ್‌ನಂತಹ ಸಂಕಷ್ಟದಲ್ಲಿ ಅನ್ನಪೂರ್ಣರವರು ಜಗ್ಗದೆ ಹೆದರದೆ ಕೆಲಸ ಮಾಡಿದ್ದಾರೆ. ಅವರಿಗೆ ನಾವು ಎಷ್ಟು ಅಭಿನಂದನೆ ಸಲ್ಲಿಸಿದರೂ ಸಹ ಸಾಲದು ಎಂದರು.
ಹೀಗೆ ನಿಮ್ಮ ಕಾರ್ಯವನ್ನು ಮುಂದುವರಿಸಿ ಎಂದು ಶುಭ ಹಾರೈಸಿದರು. ಈ ವೇಳೆ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ ಇ ಕಾಂತೇಶ್ ಸೇರಿ ಇತರರು ಹಾಜರಿದ್ದರು.