ಶಿವಮೊಗ್ಗ: ಜಿಲ್ಲೆಯ ಕಂದಾಯ, ಅರಣ್ಯ ಭೂಮಿ ತಕರಾರು ಬಗೆಹರಿಸಲು ಆಗದ ತ್ರಿಶಂಕು ಪರಿಸ್ಥಿತಿಯಲ್ಲಿ ನಮ್ಮ ಇಲಾಖೆ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಶಿವಮೊಗ್ಗ ಜಿಲ್ಲೆಯ ಪ್ರವಾಸ ನಡೆಸಿದ ಸಚಿವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಂದಾಯ ಅಧಿಕಾರಿಗಳ ಜಿಲ್ಲಾಮಟ್ಟದ ಸಭೆ ನಡೆಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ವಿಶಿಷ್ಟ ಸಮಸ್ಯೆಗಳಿವೆ. ಬಹುತೇಕ ಭೂ ಮಂಜೂರಾತಿಗೆ ಸಂಬಂಧ ಪಟ್ಟಂತೆ ಸಮಸ್ಯೆಯಾಗಿದೆ ಎಂದರು.
ಇನ್ನು ದುರಾದೃಷ್ಟಕ್ಕೆ ಅರಣ್ಯ ಇಲಾಖೆರವರು ತಮ್ಮ ಭೂಮಿ ಎಂದು ಕಾಲಕಾಲಕ್ಕೆ ಕಂದಾಯ ಇಲಾಖೆಯ ಗಮನಕ್ಕೆ ತಂದಿದ್ದರೆ ಎಲ್ಲವನ್ನು ಸರಿ ಮಾಡಬಹುದಾಗಿತ್ತು. ಈಗ ಅವರು ಅವರು ತಮ್ಮ ಭೂಮಿ ಎಂದು ತರಕಾರು ತೆಗೆದಿದ್ದರಿಂದ ಸಮಸ್ಯೆ ಬಗೆಹರಿಸಲಾಗದಂತಹ ಇಲಾಖೆ ತ್ರಿಶಂಕು ಪರಿಸ್ಥಿತಿಗೆ ಸಿಲುಕಿಕೊಂಡಿದೆ. ಇಂತಹ ಸಮಸ್ಯೆ ಹೆಚ್ಚಿಗೆ ಇರುವುದು ಶಿವಮೊಗ್ಗ ಜಿಲ್ಲೆಯಲ್ಲಿಯೇ. ಬೇರೆ ಸಮಸ್ಯೆಗಳು ನಮ್ಮ ಹಂತದಲ್ಲಿಯೇ ನಮ್ಮ ಇಚ್ಚಾ ಶಕ್ತಿಯಿಂದಲೇ ಪರಿಹರಿಸುವಂತಹ ಸಮಸ್ಯೆಗಳಿವೆ. ಅರಣ್ಯ ಹಾಗೂ ಕಂದಾಯ ಭೂಮಿ ಎಂದು ಪರಿಹರಿಸಲು ಆಗದಂತಹ ಕಷ್ಟದ ಸಮಸ್ಯೆ ಎಂದರು.
ಸರ್ವೆ ಸಿಬ್ಬಂದಿ ತುಂಬಲು ಸೂಚನೆ: ಸರ್ವೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ ಅಂತ ಡಿಸಿ ಅವರು ಹೇಳಿದ್ದಾರೆ. ನಮ್ಮ ಅಧಿಕಾರಿಗಳಿಗೆ ಮಾನವ ಸಂಪನ್ಮೂಲ ಒದಗಿಸಿಕೊಡಬೇಕು ಎಂದು ತಿಳಿಸಿದ್ದಾರೆ. 2 ಸಾವಿರ ಲೈಸನ್ಸ್ ಸರ್ವೆಯರ್ ನೇಮಕದ ಹಾದಿಯಲ್ಲಿದ್ದೇವೆ. 354 ಸರ್ಕಾರಿ ಸರ್ವೆಯರ್ ನೇಮಕದ ಪ್ರಕ್ರಿಯೆಯಲ್ಲಿದ್ದೇವೆ. ವಿಎ ನೇಮಕ ಮಾಡಿಕೊಳ್ಳಲು ಸಹ ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಲ್ಲಿ ಒಂದು ಜಿಲ್ಲೆಯಿಂದ ಇನ್ನೂಂದು ಜಿಲ್ಲೆಗೆ ಹೆಚ್ಚು ಅಂತರ ವ್ಯತ್ಯಾಸ ಇರಬಾರದು ಅಂತ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.