ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿತರಿಗೂ ಆಯುಷ್ ಚಿಕಿತ್ಸೆ ನೀಡಲಾಗುತ್ತಿದೆ: ಸಚಿವ ಈಶ್ವರಪ್ಪ - eshwarappa statement

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಆಯುಷ್ ಅಧಿಕಾರಿಗಳ ಸಭೆ ನಡೆಸಿದ ಕೆ.ಎಸ್​.ಈಶ್ವರಪ್ಪ, ಕೊರೊನಾ ಸಮಯದಲ್ಲಿ‌ ಆಯುಷ್ ಇಲಾಖೆ ತೆಗೆದುಕೊಂಡ ಕ್ರಮ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.‌

Minister K. S Eshwarappa
ಸಚಿವ ಈಶ್ವರಪ್ಪ

By

Published : Jun 19, 2020, 4:05 PM IST

ಶಿವಮೊಗ್ಗ: ಕೊರೊನಾ ಸಮಯದಲ್ಲಿ ಆಯುಷ್ ಇಲಾಖೆ ಉತ್ತಮ ಕೆಲಸ ಮಾಡುತ್ತಿದೆ. ಕೊರೊನಾ ಸೋಂಕಿತರಿಗೂ ಆಯುಷ್ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಆಯುಷ್ ಅಧಿಕಾರಿಗಳ ಸಭೆ ನಡೆಸಿದ ಅವರು, ಕೊರೊನಾ ಸಮಯದಲ್ಲಿ‌ ಆಯುಷ್ ಇಲಾಖೆ ತೆಗೆದುಕೊಂಡ ಕ್ರಮ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.‌

ಆಶಾ ಕಾರ್ಯಕರ್ತೆಯರ ಮೂಲಕ ಔಷಧ ನೀಡುವುದು ಸೇರಿದಂತೆ ಹೊಸ ಉತ್ಪನ್ನದ ಮಾಹಿತಿ ಪಡೆದುಕೊಂಡರು. ನಂತರ ಮಾತನಾಡಿದ ಅವರು, ಆಯುಷ್ ಇಲಾಖೆಯು ಜಿಲ್ಲೆಯಲ್ಲಿ ಕೊರೊನಾ ಸೂಂಕಿತರಿಗೆ ಉತ್ತಮ ಸೇವೆ ಒದಗಿಸಲಾಗುತ್ತಿದೆ. ಶಿವಮೊಗ್ಗ ರಾಮಕೃಷ್ಣ ಆಶ್ರಮಯದ ಸ್ವಾಮೀಜಿ ಅವರಿಗೂ ಸಹ ಕೊರೊನಾ ಸೋಂಕಿಗೆ ಆಯುಷ್ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ಆಚರಿಸಲಾಗುತ್ತದೆ. ಕೋವಿಡ್ ಇರುವುದರಿಂದ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಯೋಗ ಮಾಡಬೇಕು ಎಂದು ಮನವಿ‌ ಮಾಡಿಕೊಂಡರು.

ABOUT THE AUTHOR

...view details