ಕರ್ನಾಟಕ

karnataka

ETV Bharat / state

ಬಿಪಿನ್ ರಾವತ್ ನಿಧನ ಸಂಭ್ರಮಿಸುವವರ ವಿರುದ್ಧ ಪತ್ರ ಬರೆದು ಈಶ್ವರಪ್ಪ ಆಕ್ರೋಶ - ಬಿಪಿನ್ ರಾವತ್ ನಿಧನ ಸಂಭ್ರಮಿಸುವವರ ವಿರುದ್ಧ ಈಶ್ವರಪ್ಪ ಆಕ್ರೋಶ

ಕೆಲ ಸಾಮಾಜಿಕ ಜಾಲತಾಣದಲ್ಲಿ ಬಿಪಿನ್ ರಾವತ್ ನಿಧನವನ್ನು ಸಂಭ್ರಮಿಸಲಾಗುತ್ತಿದ್ದು, ಈ ಕುರಿತು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಪತ್ರ ಬರೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣಾಭಿವೃದ್ದಿ ಸಚಿವ ಕೆ ಎಸ್ ಈಶ್ವರಪ್ಪ
ಗ್ರಾಮೀಣಾಭಿವೃದ್ದಿ ಸಚಿವ ಕೆ ಎಸ್ ಈಶ್ವರಪ್ಪ

By

Published : Dec 10, 2021, 10:36 PM IST

ಶಿವಮೊಗ್ಗ: ಬಿಪಿನ್ ರಾವತ್ ನಿಧನವನ್ನು ಸಂಭ್ರಮಿಸುವವರ ವಿರುದ್ಧ ಪತ್ರ ಬರೆಯುವ ಮೂಲಕ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣಾಭಿವೃದ್ದಿ ಸಚಿವ ಕೆ ಎಸ್ ಈಶ್ವರಪ್ಪ ಬರೆದ ಪತ್ರ

ಕೆಲ ಸಾಮಾಜಿಕ ಜಾಲತಾಣದಲ್ಲಿ ಬಿಪಿನ್ ರಾವತ್ ನಿಧನವನ್ನು ಸಂಭ್ರಮಿಸಲಾಗುತ್ತಿದೆ. ರಾವತ್ ವಿಶ್ವವೇ ಮೆಚ್ಚಿರುವ ಓರ್ವ ಸೇನಾನಿಯಾಗಿದ್ದಾರೆ. ಇವರ ನಿಧನಕ್ಕೆ ದೇಶಕ್ಕೆ ದೇಶವೇ ಸಂತಾಪ ಸೂಚಿಸಿದೆ. ಇಂತಹ ದೇಶ ಭಕ್ತರಾದ ರಾವತ್ ಅವರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ದೇಶದ್ರೋಹಿಗಳ ವಿರುದ್ದ ಕ್ರಮ ತೆಗೆದುಕೊಳ್ಳುವುದು ಅತ್ಯವಶ್ಯಕವಾಗಿದೆ. ಇಂತಹ ವಿಕೃತರ ವಿರುದ್ಧ ಸಿಎಂ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿರುವುದು ಸ್ವಾಗತರ್ಹವಾಗಿದೆ. ಇನ್ನೂ ಕೇಂದ್ರ ಸರ್ಕಾರ ಇಂತಹ ವಿಕೃತರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ಇದೆ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಮತಾಂತರ‌ ನಿಷೇಧ ಕಾಯ್ದೆಗೆ ಕಾಂಗ್ರೆಸ್​ ವಿರೋಧ: ಸರಣಿ ಟ್ವೀಟ್​ ಮಾಡಿ ಕಾಲೆಳೆದ ಬಿಜೆಪಿ

ABOUT THE AUTHOR

...view details