ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಸಿ. ಎಂ. ಇಬ್ರಾಹಿಂ ಹೆಜ್ಜೆಯ ಧೂಳನ್ನು ಸಹ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ. ಎಂ. ಇಬ್ರಾಹಿಂ ಏನು, ಅವರ ಮಾಡಿದ ಅನ್ಯಾಯ ಏನು ಎಂಬುದು ಎಲ್ಲರಿಗೆ ಗೊತ್ತು. ಬಿಜೆಪಿ ಹೋರಾಟ ಮಾಡಿ ಸಚಿವ ಸಂಪುಟದಿಂದ ಅವರನ್ನು ಕಿತ್ತು ಹಾಕಿಸಿತ್ತು. ಭದ್ರಾವತಿಯಲ್ಲಿ ಅವರ ಸಹೋದರಿಗೆ ಏನು ಅನ್ಯಾಯ ಮಾಡಿದ್ದಾರೆ ಎಂಬುದು ಜಿಲ್ಲೆ ಹಾಗೂ ರಾಜ್ಯಕ್ಕೆ ಗೊತ್ತಿದೆ. ಹಾಗಾಗಿ, ಯಾವುದೇ ಕಾರಣಕ್ಕೂ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದರು.
ಸಚಿವ ಸಂಪುಟದ ವಿಸ್ತರಣೆ ಕುರಿತು ಮಾತನಾಡಿದ ಅವರು, ಗೋವಾಗೆ ಹೋಗ್ತಾರೆ, ದೆಹಲಿಗೆ ಹೋಗ್ತಾರೆ, ಒಬ್ಬೊಬ್ಬರು ಒಂದು ಕಡೆ ಹೋಗ್ತಾರೆ. ಯಾಕ್ ಹೋದರು, ಏನು ಕತೆ ನನಗೇನ್ ಗೊತ್ತಿರುತ್ತಾ?. ನೀವು ಪ್ರಶ್ನೆ ಕೇಳ್ತಿರಾ? ಉತ್ತರ ಕೋಡೊಕೆ ನನಗೇನು ಗೊತ್ತಿರುತ್ತೇ. ರಾಜ್ಯದಲ್ಲಿರೋ ಎಲ್ಲಾ ಎಂಎಲ್ಎ ಗಳು ಒಂದೊಂದು ಕಡೆ ಹೋಗ್ತಾರೆ. ಅದು ಅವರ ಇಚ್ಛೆ ಎಂದು ಹೇಳಿದರು.