ಕರ್ನಾಟಕ

karnataka

ETV Bharat / state

ಕೈ ಮುಗಿತೀನಿ ಸುಮಲತಾ-ಕುಮಾರಸ್ವಾಮಿ ವಿಚಾರ ಬಿಟ್ಬಿಡಿ: ಈಶ್ವರಪ್ಪ - ಸುಮಲತಾ ಹೆಚ್​​ಡಿಕೆ ವಾಗ್ವಾದ

ಮಂಡ್ಯ ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ವಾಗ್ವಾದದ ಬಗ್ಗೆ ಪ್ರತಿಕ್ರಿಯಿಸಲು ಸಚಿವ ಕೆ.ಎಸ್​ ಈಶ್ವರಪ್ಪ ನಿರಾಕರಿಸಿದರು.

Minister Eswarappa press meet
ಸಚಿವ ಕೆ.ಎಸ್​ ಈಶ್ವರಪ್ಪ

By

Published : Jul 10, 2021, 2:12 PM IST

ಶಿವಮೊಗ್ಗ: ನಾನು ನಿಮಗೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಸುಮಲತಾ ಮತ್ತು ಕುಮಾರಸ್ವಾಮಿಯವರ ವಿಚಾರ ಬಿಟ್ಟು ಬಿಡಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಕೆ.ಎಸ್​ ಈಶ್ವರಪ್ಪ ಮಾಧ್ಯಮದವರಿಗೆ ಮನವಿ ಮಾಡಿದರು.

ನಗರದ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ನಿಮಗೆ ಬೇರೆ ಯಾವ ವಿಚಾರವ ಇಲ್ವಾ? ದೇಶದಲ್ಲಿ ಬೇಕಾದಷ್ಟು ಸಮಸ್ಯೆಗಳು ಇವೆ. ಅದನ್ನು ಬಿಟ್ಟು ಅವರು ಏನ್ ಹೇಳಿದ್ರು, ಇವರೇನು ಹೇಳಿದ್ರು ಅಂತ ತೋರಿಸುತ್ತೀರಾ. ಇದಕ್ಕೇನಾದ್ರು ಅರ್ಥ ಇದೆಯಾ ಎಂದು ಪ್ರಶ್ನಿಸಿದರು.

ಸಚಿವ ಕೆ.ಎಸ್​ ಈಶ್ವರಪ್ಪ

ಓದಿ : ಮಹಿಳೆಯರು ಅಧಿಕಾರದಲ್ಲಿರೋದನ್ನ ಕೆಲವರು ಸಹಿಸಲ್ಲ: ಟ್ವೀಟ್ ಮೂಲಕ HDKಗೆ ಕುಟುಕಿದ ಸುಮಲತಾ

ಈಗಾಗಲೇ, ಕೆಆರ್​ಎಸ್ ಬಿರುಕು ವಿಚಾರದ ಕುರಿತು ಮುರುಗೇಶ್ ನಿರಾಣಿ ಸರ್ಕಾರದ ಪರವಾಗಿ ಹೇಳಿಕೆ ಕೊಟ್ಟಿದ್ದಾರೆ. ನಾನು ಅವರಿಬ್ಬರ ಬಗ್ಗೆ ಟೀಕೆ ಮಾಡಲು ಹೋಗಲ್ಲ. ಸಹೋದರಿ ಸುಮಲತಾ ಹಾಗೂ ಕುಮಾರಸ್ವಾಮಿ ಇಬ್ಬರ ಬಗ್ಗೆಯೂ ನನಗೆ ಗೌರವವಿದೆ. ಅವರಿಬ್ಬರು ವಾಗ್ವಾದ ನಿಲ್ಲಿಸಬೇಕು. ಅವರು‌ ನಿಲ್ಲಿಸುತ್ತಾರೋ ಇಲ್ಲವೋ, ಟಿವಿಯವರು ಮೊದಲು ನಿಲ್ಲಿಸಿ ಎಂದು ಹೇಳಿದರು.

ಅವರು ಎಳೆದು ಕೊಂಡು ಹೋಗ್ತಾರೆ, ನೀವು ಹೋಗ್ತಿರಾ ಎಂದು ಗರಂ ಆದರು‌. ಜನ ಸಾಯ್ತಿದ್ದಾರೆ ಅದರ ಬಗ್ಗೆ ನೋಡಿ. ನಾನು ಮಾಧ್ಯಮದವರನ್ನು ಟೀಕೆ ಮಾಡುತ್ತಿದ್ದೇನೆ ಅಂದುಕೊಳ್ಳಬೇಡಿ ಎಂದರು.

ABOUT THE AUTHOR

...view details