ಕರ್ನಾಟಕ

karnataka

ETV Bharat / state

ಕೋವಿಡ್ ಸಾವು ಮರೆಮಾಚಲು ಚೀನಾ ಭಾರತದ ಮೇಲೆ ದಾಳಿ ಮಾಡಿದೆ: ಸಚಿವ ಈಶ್ವರಪ್ಪ - china india war

ಈ ಹಿಂದೆ ದಾಳಿ ನಡೆಸಿದಾಗ ಮರು ದಾಳಿ ಮಾಡಲು ಅವಕಾಶವಿರಲಿಲ್ಲ. ಅದರೆ ಈಗ ಹಾಗಲ್ಲ ಮುಂದಿನ ಸೈನಿಕ ಮೇಲೆ ದಾಳಿಯಾದ್ರೆ, ಆತನ ಹಿಂಬದಿ ಸೈ‌ನಿಕನಿಗೆ ಎದುರಾಳಿಯ ಮೇಲೆ ದಾಳಿ ಮಾಡುವ ಅವಕಾಶ ನೀಡಲಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

Minister Eshwarappa
ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ

By

Published : Jun 17, 2020, 9:17 PM IST

ಶಿವಮೊಗ್ಗ: ಚೀನಾದಲ್ಲಿ ಕೋವಿಡ್-19 ಹೆಚ್ಚಾಗಿದೆ. ಸೋಂಕಿತರ ಸಾವನ್ನು ಮರೆಮಾಚಲು ಚೀನಾ ಈ ರೀತಿ ಭಾರತದ ಸೈನಿಕರ ಮೇಲೆ ದಾಳಿ ಮಾಡುತ್ತಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಚೀನಾದ ವಿರುದ್ದ ಕಿಡಿಕಾರಿದರು.

ಚೀನಾ ದೇಶದ ವಸ್ತುಗಳನ್ನು ಖರೀದಿ ಮಾಡಬಾರದು ಎಂದು ಪ್ರಧಾನಿ ಮೋದಿ ಕರೆ ನೀಡಿದ ಕಾರಣ ಚೀನಾ ಭಾರತದ ಮೇಲೆ ದಾಳಿ ನಡೆಸಲು ಮುಂದಾಗಿದೆ. ಅಲ್ಲದೆ ಭಾರತ ಲಡಾಖ್​ ನಲ್ಲಿ ತನ್ನ ಪ್ರದೇಶದಲ್ಲಿ ರಸ್ತೆಯನ್ನು ಅಭಿವೃದ್ದಿ ಪಡಿಸಲು ಮುಂದಾಗಿದೆ. ಇದರಿಂದ ಚೀನಾಗೆ ತನ್ನ ಮೇಲೆ ಭಾರತ ದಾಳಿ ಮಾಡಲು ಮುಂದಾಗಿದೆ ಎಂಬ ಭಾವನೆ ಇದೆ ಎಂದರು.

ಈ ಹಿಂದೆ ದಾಳಿ ನಡೆಸಿದಾಗ ಮರು ದಾಳಿ ಮಾಡಲು ಅವಕಾಶವಿರಲಿಲ್ಲ. ಅದರೆ ಈಗ ಹಾಗಲ್ಲ ಮುಂದಿನ ಸೈನಿಕ ಮೇಲೆ ದಾಳಿಯಾದ್ರೆ, ಆತನ ಹಿಂಬದಿ ಸೈ‌ನಿಕನಿಗೆ ಎದುರಾಳಿಯ ಮೇಲೆ ದಾಳಿ ಮಾಡುವ ಅವಕಾಶ ನೀಡಲಾಗಿದೆ ಎಂದರು.

ಭಾರತ ಇಂದು ಒಬ್ಬಂಟಿಯಲ್ಲ. ಪ್ರಪಂಚದ ಎಲ್ಲಾ ದೇಶಗಳು ನಮ್ಮೂಂದಿಗೆ ಇವೆ. ಇಂದು ಚೀನಾ ಹಾಗೂ ಪಾಕ್ ಒಬ್ಬಂಟಿಯಾಗಿವೆ. ನಮ್ಮ ಬಳಿಯು ಅಣು ಬಾಂಬ್​ಗಳಿವೆ. ಚೀನಾಗೆ ನಮ್ಮ ಶಕ್ತಿಯ ಬಗ್ಗೆ ಅರಿವಿದೆ. ಚೀನಾ ನಮ್ಮ ಮೇಲೆ ದಾಳಿ ನಡೆಸಿದರೆ ಅವರನ್ನು ಸದೆ ಬಡೆಯುವ ವಿಶ್ವಾಸವಿದೆ ಎಂದರು.

ABOUT THE AUTHOR

...view details