ಕರ್ನಾಟಕ

karnataka

ETV Bharat / state

'ನಮ್ಮ ಶಾಸಕರು ಕೋವಿಡ್‌ ನಿಯಮ ಉಲ್ಲಂಘಿಸಿದರೆ ಅವರ ಮೇಲೂ ಕೇಸ್‌ ಹಾಕಲಿ' - Minister eshwarappa spoke about mekedatu project

ನಾನು ಸರ್ಕಾರವನ್ನು ನಂಬಿರುವವನು. ಹಾಗಾಗಿ, ಅವರು ಸರ್ಕಾರ ಕೊಟ್ಟ ಅಂಕಿ-ಅಂಶ ಸುಳ್ಳು ಅಂತಾ ಹೇಳಲ್ಲ. ಸರ್ಕಾರದ ಅಂಕಿ-ಅಂಶ ಸುಳ್ಳು ಅಂತಾ ಹೇಳಿದರೆ, ನೀವು ಜನರಿಗೆ ಮಾಡುತ್ತಿರುವ ಅಪಮಾನ. ಹೀಗಾಗಿ, ಡಿ.ಕೆ.ಶಿವಕುಮಾರ್ ರಾಜ್ಯದ ಜನರ ಕ್ಷಮೆ ಕೇಳಬೇಕು ಸಚಿವ ಈಶ್ವರಪ್ಪ ಆಗ್ರಹಿಸಿದರು.

Minister Eshwarappa
ಸಚಿವ ಕೆ. ಎಸ್ ಈಶ್ವರಪ್ಪ

By

Published : Jan 11, 2022, 4:40 PM IST

ಶಿವಮೊಗ್ಗ: ನಮ್ಮ ಶಾಸಕರು ಸಹ ಕೋವಿಡ್ ಉಲ್ಲಂಘನೆ ಮಾಡಿದ್ದರೆ ಅವರ ಮೇಲೂ ಕೇಸ್ ಹಾಕಲಿ ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ನಮ್ಮವರು ಕ್ಷಮೆಯನ್ನಾದ್ರೂ ಕೇಳಿದ್ರು. ಆದರೆ, ಕಾಂಗ್ರೆಸ್​ನವರು ಅದನ್ನೂ ಮಾಡಿಲ್ಲ. ರೇಣುಕಾಚಾರ್ಯ ಅವರು ನಾನು ಮಾಡಿದ್ದು ತಪ್ಪು, ಯುವಕರು ಒತ್ತಾಯ ಮಾಡಿದ್ದಕ್ಕೆ ಹೋಗಿ ಕ್ಷಮೆ ಕೇಳುತ್ತೇನೆ ಎಂದು ಹೇಳಿರುವುದಾಗಿ ಅವರು ತಿಳಿಸಿದರು.


ಮೇಕೆದಾಟು ಪಾದಯಾತ್ರೆ ವಿಚಾರ:

ಅವರು ಏನು ಮಾಡಿಕೊಳ್ಳುತ್ತೀರಾ ಮಾಡಿಕೊಳ್ಳಿ ಎಂದು ದಾದಾಗಿರಿ, ಗೂಂಡಾಗಿರಿ ಪ್ರದರ್ಶನ ಮಾಡ್ತಾ ಇದ್ದಾರೆ‌. ಕೋವಿಡ್ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ನೋಡುತ್ತಿದ್ದೇವೆ. ಆದರೆ, ಡಿಕೆಶಿ ಅವರು ಸುಳ್ಳು ಅಂಕಿ-ಅಂಶ ಎನ್ನುತ್ತಿದ್ದಾರೆ. ಮುಂದೆ ಮುಖ್ಯಮಂತ್ರಿ ಆಗಬೇಕು ಎಂಬ ಕನಸು ಕಾಣುತ್ತಿರುವ ವ್ಯಕ್ತಿ ಸರ್ಕಾರ ನೀಡುವ ಅಂಕಿ-ಅಂಶಗಳನ್ನು ಸುಳ್ಳು ಎನ್ನುತ್ತಾರೆ. ಹಾಗಾದ್ರೆ, ನಿಮ್ಮ ಸರ್ಕಾರ ಇದ್ದಾಗ ನೀಡಿದ ಅಂಕಿ-ಅಂಶಗಳು ಸುಳ್ಳಾ? ಎಂದು ಅವರು ಪ್ರಶ್ನಿಸಿದರು. ಸರ್ಕಾರಕ್ಕೆ ಬಹಳ ಗೌರವ ಇದೆ. ಸರ್ಕಾರ ಕೊಡುತ್ತಿರುವ ಮಾಹಿತಿ ಸುಳ್ಳು ಎನ್ನುವುದಾದರೆ, ಸ್ವಾತಂತ್ರ್ಯ ಬಂದು ಎಷ್ಟು ವರ್ಷ ಕಾಂಗ್ರೆಸ್ ಅಧಿಕಾರ ನಡೆಸಿದೆ?.

ನಾನು ಸರ್ಕಾರವನ್ನು ನಂಬಿರುವವನು. ಹಾಗಾಗಿ, ಅವರ ಸರ್ಕಾರ ಕೊಟ್ಟ ಅಂಕಿ-ಅಂಶಗಳು ಸುಳ್ಳು ಅಂತಾ ಹೇಳಲ್ಲ. ಸರ್ಕಾರದ ಅಂಕಿ-ಅಂಶ ಸುಳ್ಳು ಅಂತಾ ಹೇಳಿದರೆ, ನೀವು ಜನರಿಗೆ ಮಾಡುತ್ತಿರುವ ಅಪಮಾನ ಎಂದರು. ಹೀಗಾಗಿ ಡಿ.ಕೆ.ಶಿವಕುಮಾರ್ ರಾಜ್ಯದ ಜನರ ಕ್ಷಮೆ ಕೇಳಬೇಕು. ಕಾಂಗ್ರೆಸ್‌ನವರು ಮರ್ಯಾದಸ್ಥರಿಗೆ 30 ಮತ್ತು ಇತರರಿಗೆ ಅಂತಾ ಕೇಸ್ ಹಾಕಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ:ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಕೋವಿಡ್​ ನಿಯಮ ಉಲ್ಲಂಘನೆ: ಶಾಸಕ ರೇಣುಕಾಚಾರ್ಯ ಮೇಲೆ ಕ್ರಮ ಏಕಿಲ್ಲ?

For All Latest Updates

TAGGED:

ABOUT THE AUTHOR

...view details