ಕರ್ನಾಟಕ

karnataka

ETV Bharat / state

ಕಟೀಲ್​ ಅವರದ್ದು ಎನ್ನಲಾದ ಆಡಿಯೋದ ಬಗ್ಗೆ ಈಶ್ವರಪ್ಪ ಏನಂದ್ರು? - ಶಿವಮೊಗ್ಗ

ಬಿಜೆಪಿ ರಾಜ್ಯಾಧ್ಯಕರು ಈ ರೀತಿ ಮಾತನಾಡಲು ಸಾಧ್ಯವಿಲ್ಲ. ಮಂತ್ರಿ ಸ್ಥಾನ ಹೋದರೆ ನನಗೆ ಯಾವುದೇ ಚಿಂತೆ ಇಲ್ಲ. ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಚಿವ ಕೆ.ಎಸ್​ ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ್ದಾರೆ.

Minister Eshwarappa
ಈಶ್ವರಪ್ಪ ಏನಂದ್ರು

By

Published : Jul 19, 2021, 10:12 AM IST

Updated : Jul 19, 2021, 11:11 AM IST

ಶಿವಮೊಗ್ಗ:ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅವರದ್ದು ಎನ್ನಲಾದ ಆಡಿಯೋದ ಬಗ್ಗೆ ಸಚಿವ ಕೆ.ಎಸ್.​ ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ್ದಾರೆ.

ಮಂತ್ರಿ ಸ್ಥಾನದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ:

ಕಟೀಲ್​ ಅವರದ್ದು ಎನ್ನಲಾದ ಆಡಿಯೋ ಯಾರೋ ಸೃಷ್ಟಿ ಮಾಡಿರುವಂಥದ್ದು. ಅವರು ಆ ರೀತಿ ಹೇಳಲೇ ಇಲ್ಲ. ಅವರ ಧ್ವನಿಯನ್ನು ಅನುಕರಣೆ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕರು ಈ ರೀತಿ ಮಾತನಾಡಲು ಸಾಧ್ಯವಿಲ್ಲ. ಮಂತ್ರಿ ಸ್ಥಾನ ಹೋದರೆ ನನಗೆ ಯಾವುದೇ ಚಿಂತೆ ಇಲ್ಲ. ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಪಕ್ಷದ ಸಂಘಟನೆಯ ಕೆಲಸ ನಿರಂತರವಾಗಿ ಮುಂದುವರಿಸುತ್ತೇನೆ ಎಂದರು.

ಆಡಿಯೋದ ಬಗ್ಗೆ ಈಶ್ವರಪ್ಪ ಏನಂದ್ರು

ಸಂಘಟನೆ ನೀಡುವ ಯಾವುದೇ ಜವಾಬ್ದಾರಿ ವಹಿಸಿಕೊಳ್ಳಲು ನಾನು ಸಿದ್ಧ. ಇಡೀ ದೇಶದಲ್ಲಿ ಯುವಕರಿಗೆ ಜವಾಬ್ದಾರಿ ಕೊಡುತ್ತಿದ್ದಾರೆ. ನಳಿನ್​ ಕುಮಾರ್​ ನೇತೃತ್ವದಲ್ಲಿ ರಾಜ್ಯದಲ್ಲಿ ಸಂಘಟನೆ ಅತ್ಯದ್ಭುತವಾಗಿ ಬೆಳೆಯುತ್ತಿದೆ. ಹಿಂದೂ ಸಮಾಜದ ಅಭಿವೃದ್ಧಿಯೇ ನನ್ನ ಗುರಿ ಎಂದು ಹೇಳಿದರು.

ನಳಿನ್​ ಕುಮಾರ್​ ಕಟೀಲ್​ ಅವರದ್ದು ಎನ್ನಲಾದ ಆಡಿಯೋ ಸೃಷ್ಟಿ ಮಾಡಿ ಅದನ್ನು ವೈರಲ್​ ಮಾಡಿದ್ದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

Last Updated : Jul 19, 2021, 11:11 AM IST

ABOUT THE AUTHOR

...view details