ಕರ್ನಾಟಕ

karnataka

ETV Bharat / state

ಕ್ಯಾದಿಗೆಕೆರೆ ಪುನರುಜ್ಜೀವನ ಕಾಮಗಾರಿ: ಪರಿಸರಾಸಕ್ತರ ಕಾರ್ಯಕ್ಕೆ ಈಶ್ವರಪ್ಪ ಮೆಚ್ಚುಗೆ

ಶಿವಮೊಗ್ಗ ನಗರದ ಹೊರವಲಯದಲ್ಲಿರುವ ವಾಜಪೇಯಿ ಬಡಾವಣೆಯ ಬಳಿಯ ಕ್ಯಾದಿಗೆಕೆರೆಯ ಅಭಿವೃದ್ದಿ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್​ ಈಶ್ವರಪ್ಪ ವೀಕ್ಷಿಸಿದರು.

Kyadigere development work
ಪುನರುಜ್ಜೀವ ಪಡೆಯುತ್ತಿರುವ ಕ್ಯಾದಿಗೆಕೆರೆ

By

Published : Jun 6, 2021, 7:22 AM IST

ಶಿವಮೊಗ್ಗ: ನಗರದ ಹೊರವಲಯದಲ್ಲಿರುವ ವಾಜಪೇಯಿ ಬಡಾವಣೆಯಲ್ಲಿ ಕಣ್ಮರೆಯಾಗುತ್ತಿದ್ದ ಕ್ಯಾದಿಗೆಕೆರೆಯನ್ನು ಉಳಿಸುವ ನಿಟ್ಟಿನಲ್ಲಿ ಪರಿಸರಾಸಕ್ತರ ತಂಡವೊಂದು ಕಾರ್ಯ ನಿರತವಾಗಿದೆ.

ವಾಜಪೇಯಿ ಬಡಾವಣೆಯನ್ನು ಶಿವಮೊಗ್ಗ ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲಾಗಿದೆ. ಇಲ್ಲಿ ಪುರಾತನ ಕಾಲದ ಕೆರೆ ಇತ್ತು. ಆದರೆ, ನಗರೀಕರಣ ಬೆಳೆದಾಗ ಕೆರೆ ಕಣ್ಮರೆಯಗುತ್ತಾ ಸಾಗಿದೆ. ಇದೀಗ ಆರು ಎಕರೆ ಪ್ರದೇಶದಲ್ಲಿದ್ದ ಕೆರೆಯಲ್ಲಿ 2 ಎಕರೆಯನ್ನು ಪುನರುಜ್ಜೀವನ ನಡೆಸಲಾಗುತ್ತಿದೆ. ಉಳಿದ 4 ಎಕರೆಯಲ್ಲಿ ಅತ್ತ್ಯುತ್ತಮ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದೆ.

ಕ್ಯಾದಿಗೆಕೆರೆ ಅಭಿವೃದ್ಧಿ ಕಾರ್ಯ

ಗಿಡ ನೆಟ್ಟು, ಕೇರೆಗೆ ಮೀನುಗಳನ್ನು ಸೇರಿಸಿದ ಸಚಿವರು:

ಕ್ಯಾದಿಗೆರೆಯ ಅಭಿವೃದ್ದಿ ಕಾಮಗಾರಿಯ ಉಸ್ತುವಾರಿಯನ್ನು ನಟ ಏಸು ಪ್ರಕಾಶ್ ಅವರ ಸಾರಾ ಸಂಸ್ಥೆ ವಹಿಸಿಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಕೆರೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಇದೇ ವೇಳೆ ಪರಿಸರಾಸಕ್ತರ ತಂಡದ ಕಾರ್ಯವನ್ನು ಶ್ಲಾಘಿಸಿದರು. ಇದೇ ವೇಳೆ ಅವರು ಉದ್ಯಾನವನದಲ್ಲಿ ರುದ್ರಾಕ್ಷಿ ಗಿಡ ನೆಟ್ಟು, ಕೆರೆಗೆ ಮೀನು‌ಗಳನ್ನು ಸೇರಿಸಿದರು.

ಕ್ಯಾದಿಗೆಕೆರೆ ಪುನರುಜ್ಜೀವನ ಕಾಮಗಾರಿ

ಜನ್ಮ ದಿನದ ಪ್ರಯುಕ್ತ ಕೆರೆ ಅಭಿವೃದ್ಧಿ:

ಕೊರೊನಾ ಕಾರಣದಿಂದ ಜೂನ್ 10 ರಂದು ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿ, ಅಂದೇ ಸಾಗರ ರಸ್ತೆಯ ಕೆರೆ ಅಭಿವೃದ್ದಿಗೆ ಚಾಲನೆ ನೀಡಲಿದ್ದೇನೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.

ABOUT THE AUTHOR

...view details