ಶಿವಮೊಗ್ಗ:ಕುಮಾರಸ್ವಾಮಿ ಅವರ ಪಕ್ಷ ಜೀವಂತವಾಗಿದೆ ಎಂದು ತೋರಿಸಲು ಮಂಗಳೂರಿನ ವಿಡಿಯೋ ರಿಲೀಸ್ ಮಾಡಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ, ಹೆಚ್ಡಿಕೆ ವಿಡಿಯೋ ರಿಲೀಸ್ ಬಗ್ಗೆ ಶಿವಮೊಗ್ಗದಲ್ಲಿ ವ್ಯಂಗ್ಯವಾಡಿದ್ದಾರೆ.
ಈಗ ಜೆಡಿಎಸ್ ಎಂಎಲ್ಎಗಳು ಅಲ್ಲೊಂದು ಇಲ್ಲೊಂದು ಸ್ಥಾನ ಗೆಲ್ತಾ ಇದ್ದಾರೆ. ಮುಂದಿನ ದಿನಗಳಲ್ಲಿ ಅವರೂ ಸಹ ಬಿಜೆಪಿಗೆ ಬರಲಿದ್ದಾರೆ. ಕುಮಾರಸ್ವಾಮಿ ಅವರು ಮಂಗಳೂರು ಗಲಭೆಯ ಬಗ್ಗೆ ನಮ್ಮ ಸರ್ಕಾರದ ಬಗ್ಗೆ ಆರೋಪ ಮಾಡ್ತಾ ಇದ್ದಾರೆ. ಮಂಗಳೂರಿನಲ್ಲಿ ಯಾರು ಗಲಭೆ ಮಾಡಿದ್ರು, ಪೊಲೀಸರ ಮೇಲೆ ಯಾರು ಕಲ್ಲು ತೂರಿದರು, ವ್ಯಾನ್ಗಳಲ್ಲಿ ಕಲ್ಲು ತಂದು ಹಾಕಿ ಕಲ್ಲು ತೂರಾಟ ಮಾಡಿದವರಿಗೆ ಸಹಾಯ ಮಾಡಿದವರು ಯಾರು? ಅಂತ ರಾಜ್ಯದ ಜನ ಮಾಧ್ಯಮಗಳಲ್ಲೆ ನೋಡಿದ್ದಾರೆ. ಇನ್ನು ಈ ಗಲಭೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಒತ್ತಾಯಿಸಿದ್ದರು. ಅದರಂತೆ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದೆ. ನ್ಯಾಯಾಂಗ ತನಿಖೆಯ ವರದಿ ಬರುವವರೆಗೂ ಕಾಯುವುದಕ್ಕೆ ಇವರಿಗೆ ಆಗೋದಿಲ್ಲ. ಹೀಗಾಗಿ ತಾವು ಬದುಕಿದ್ದೇವೆ ಎಂದು ತೋರಿಸಲು ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡ್ತಾ ಇದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಕುತಂತ್ರದ ರಾಜಕಾರಣಕ್ಕೆ ಬಗ್ಗಲ್ಲ ಎಂದರು.