ಕರ್ನಾಟಕ

karnataka

ETV Bharat / state

2ನೇ ಕೊರೊನಾ ಕೆಟ್ಟದ್ದು, ಆದರೂ ಅದರ ಬಗ್ಗೆ ಭಯ ಬೇಡ; ಈಶ್ವರಪ್ಪ - ಲಂಡನ್ ಕೊರೊನಾ

ಶಿವಮೊಗ್ಗಕ್ಕೆ ಲಂಡನ್​ನಿಂದ 23 ಜನ ಆಗಮಿಸಿದ್ದರು. ಅವರಲ್ಲಿ ನಾಲ್ವರಿಗೆ ಕೊರೊನಾ ಧೃಢಪಟ್ಟಿತ್ತು. ಈ ಕುರಿತು ಕೇಂದ್ರವೇ ವರದಿ ಮೂಲಕ ತಿಳಿಸಿದೆ. ಸದ್ಯ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

Minister Eshwarappa
ಸಚಿವ ಈಶ್ವರಪ್ಪ

By

Published : Dec 31, 2020, 6:28 PM IST

ಶಿವಮೊಗ್ಗ: ಹಳೆಯ ಕೊರೊನಾ ಉಪನ್ಯಾಸ ಮಾಡ್ತಾ ಇತ್ತು. ಈಗಿನ ಕೊರೊನಾ ಕೆಟ್ಟದ್ದು, ಆದರೂ ಜನ ಜಾಗೃತಿಯಿಂದ ಇರಬೇಕು ಎಂದು ಸಚಿವ ಈಶ್ವರಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಹಳೆಯ‌ ಕೊರೊನಾ ಉಪನ್ಯಾಸ ಮಾಡುತ್ತಿತ್ತು, ಎರಡನೇ ಕೊರೊನಾ ಕೆಟ್ಟದ್ದು, ಆದರೂ ಭಯಬೇಡ ಎಂದ ಈಶ್ವರಪ್ಪ

ಶಿವಮೊಗ್ಗಕ್ಕೆ ಲಂಡನ್​ನಿಂದ 23 ಜನ ಆಗಮಿಸಿದ್ದರು. ಅವರಲ್ಲಿ ನಾಲ್ವರಿಗೆ ಕೊರೊನಾ ಧೃಢಪಟ್ಟಿತ್ತು. ಈ ಕುರಿತು ಕೇಂದ್ರವೇ ವರದಿ ಮೂಲಕ ತಿಳಿಸಿದೆ. ಸದ್ಯ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲರೂ ಸಹ ಆಸ್ಪತ್ರೆಯಲ್ಲಿ ಇದ್ದಾರೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದರು.

ಲಂಡನ್ ಕೊರೊನಾ ವೇಗವಾಗಿ ಹರಡುತ್ತಿದೆ ಎಂಬ ಪ್ರಶ್ನೆಗೆ ಹೌದು, ಕೆಟ್ಟದ್ದು ಮಾಡಿದ್ರೆ ಬೇಗ ಹರಡುತ್ತೆ. ಒಳ್ಳೆಯದು ಬೇಗ ಹರಡುವುದಿಲ್ಲ. ಉಪನ್ಯಾಸ ನೀಡಿದ್ರೆ ಯಾರೂ ಕೇಳಲ್ಲ, ಅದೇ ಕೆಟ್ಟದು ಮಾಡಿದ್ರೆ ಎಲ್ಲರಿಗೂ ಗೊತ್ತಾಗುತ್ತದೆ. ಇದರಿಂದ ಮೊದಲನೆಯದಕ್ಕಿಂತ ಎರಡನೆಯದು ಕೆಟ್ಟದ್ದು, ಆದರೂ ಭಯ ಬೇಡ. ಎರಡನೇ ಕೊರೊನಾದಿಂದ ಸಾವು ಶೇ 99 ರಷ್ಟು ಇರಲ್ಲ ಅಂತ ತಜ್ಞರೇ ತಿಳಿಸಿದ್ದಾರೆ. ಯಾರೂ ಭಯಪಡುವ ಅವಶ್ಯಕತೆ ಇಲ್ಲ ಎಂದರು.

ಹೊಸ ವರ್ಷ ಆಚರಣೆ ಪಾರ್ಟಿ ಅಂತ ಹೋದ್ರೆ, ಪೊಲೀಸ್ ಸ್ಟೇಷನ್​ಗೆ ಗ್ಯಾರಂಟಿ ಹೋಗ್ತಾರೆ. ಕೊರೊನಾದ ಈ ಸಮಯದಲ್ಲಿ ಯಾವ ಹೊಸ ವರ್ಷ ಆಚರಣೆ ಬೇಡ. ಆದರೂ ನಮಗೆ ಹೊಸ ವರ್ಷ ಅಂದ್ರೆ, ಯುಗಾದಿ. ಕ್ಯಾಲೆಂಡರ್ ಪ್ರಕಾರ ಆದ್ರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದರು. ಈ ವೇಳೆ ಜಿಲ್ಲಾಧ್ಯಕ್ಷ ಮೇಘರಾಜ್ ಸೇರಿ ಇತರರು ಹಾಜರಿದ್ದರು.

ABOUT THE AUTHOR

...view details