ಶಿವಮೊಗ್ಗ: ಕೃಷಿ ಸಚಿವ ಬಿ.ಸಿ. ಪಾಟೀಲ್ ಮತ್ತು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಯೋಗ ಮಾಡುವ ಮೂಲಕ ಯೋಗ ದಿನವನ್ನು ಆಚರಿಸಿದರು.
ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ವಗ್ರಾಮವಾದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಯಲವಾಳ ಗ್ರಾಮದ ತೋಟದಲ್ಲಿ ಯೋಗ ಮಾಡಿದರು. ಹಲವು ಯೋಗಾಸನ ಮಾಡುವ ಮೂಲಕ ಸಚಿವರು ಗಮನ ಸೆಳೆದರು.
ತೋಟದ ಮನೆಯಲ್ಲಿ ಸಚಿವರಾದ ಬಿ.ಸಿ. ಪಾಟೀಲ್, ಎಸ್ ಟಿ ಸೋಮಶೇಖರ್ ಯೋಗಾಭ್ಯಾಸ ಇದೇ ವೇಳೆ ಯೋಗದ ಬಗೆಗಳಾದ ಪ್ರಾಣಾಯಾಮ, ಕಪಾಲಬಾತಿ ಜೊತೆಗೆ ಧ್ಯಾನ ಮಾಡಿದರು. ಯೋಗ ದಿನವನ್ನು ಆಚರಿಸಿ ಮಾತನಾಡಿದ ಸಚಿವ ಬಿ.ಸಿ. ಪಾಟೀಲ್ ಯೋಗ ಎನ್ನುವುದು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ನೀಡಬಲ್ಲದು ಎಂದು ತಿಳಿಸಿದರು.
ವಿಶ್ವಕ್ಕೆ ಯೋಗ ನೀಡಿದ ದೇಶ ನಮ್ಮದು. ಪ್ರಸ್ತುತ ಜೀವನ ಶೈಲಿಯ ಬದಲಾವಣೆಯಿಂದ ಮಧುಮೇಹ ಬಿ.ಪಿ ಸೇರಿದಂತೆ ಹಲವು ಸಮಸ್ಯೆಗಳು ಯುವ ಜನರಿಗೆ ಸಹ ಕಾಡುತ್ತಿವೆ. ಆದರೆ ಪ್ರತಿದಿನ ಯೋಗ ಮಾಡುವುದರಿಂದ ಈ ಎಲ್ಲಾ ಸಮಸ್ಯೆಗಳಿಂದ ದೂರವಿರಬಹುದು ಎಂದರು.