ಕರ್ನಾಟಕ

karnataka

ETV Bharat / state

ಶಾಲಾ ಮಕ್ಕಳಿಗೆ ದೈನಂದಿನ ಪಾಠದ ಜೊತೆಗೆ ವ್ಯಾಪಾರದ ಜ್ಞಾನಕ್ಕಾಗಿ‌ ನಡೆದ ಮೆಟ್ರಿಕ್‌ ಮೇಳ - ಮೆಟ್ರೀಕ್ ಮೇಳ

ಮೆಟ್ರಿಕ್​ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ವ್ಯಾಪಾರ ವಹಿವಾಟು ಕಲಿಸುವ ಉದ್ದೇಶದಿಂದ ಮಕ್ಕಳಿಗೆ ಸಂತೆ ಮೇಳವನ್ನು ಶಾಲಾ ಶಿಕ್ಷಕರು ಆಯೋಜನೆ ಮಾಡಿದ್ದರು.

ವ್ಯಾಪಾರ ಜ್ಞಾನಕ್ಕಾಗಿ‌ ಶಾಲಾ ಮಕ್ಕಳಿಗೆ ಮೆಟ್ರಿಕ್‌ ಮೇಳ
ವ್ಯಾಪಾರ ಜ್ಞಾನಕ್ಕಾಗಿ‌ ಶಾಲಾ ಮಕ್ಕಳಿಗೆ ಮೆಟ್ರಿಕ್‌ ಮೇಳ

By

Published : Feb 15, 2023, 4:31 PM IST

ವ್ಯಾಪಾರ ಜ್ಞಾನಕ್ಕಾಗಿ‌ ಶಾಲಾ ಮಕ್ಕಳಿಗೆ ಮೆಟ್ರಿಕ್‌ ಮೇಳ

ಶಿವಮೊಗ್ಗ: ಶಾಲೆಯಲ್ಲಿ ಮಕ್ಕಳಿಗೆ ಸಾಮಾನ್ಯ ಜ್ಞಾನ ದೂರೆಯಬೇಕು ಎಂದು ಸಂತೆ ವ್ಯಾಪಾರ, ವಹಿವಾಟು ಕಲಿಸುವ ಉದ್ದೇಶದಿಂದ ನಗರದ ದುರ್ಗಿಗುಡಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಮೆಟ್ರಿಕ್ ಮೇಳವನ್ನು ಶಿಕ್ಷಕರು ಆಯೋಜಿಸಿದ್ದರು. ದುರ್ಗಿಗುಡಿ ಆಂಗ್ಲ‌ ಮಾಧ್ಯಮ ಶಾಲೆಯು ರಾಜ್ಯದಲ್ಲಿಯೇ ಉತ್ತಮ ಹೆಸರನ್ನು ಪಡೆದು ಕೊಂಡಿದೆ. ಈ ಶಾಲೆ ಪ್ರವೇಶಾತಿಗಾಗಿ ಸಾಕಷ್ಟು ಪೈಪೋಟಿ ನಡೆಯುತ್ತಿದೆ.

ಇಂತಹ ಶಾಲೆಯಲ್ಲಿ ಮಕ್ಕಳಿಗೆ ಸಾಮಾನ್ಯ ಜ್ಞಾನ ದೂರೆಯಬೇಕು, ಮಾರುಕಟ್ಟೆ ಹೇಗೆ ಇರುತ್ತದೆ. ಮಾರುಕಟ್ಟೆಯ ವ್ಯಾಪಾರ ಹೇಗೆ ನಡೆಯುತ್ತದೆ. ವ್ಯಾಪಾರ ವಹಿವಾಟು ಪಠ್ಯಕ್ಕೆ ಹೇಗೆ ಅನುಕೂಲ ವಾಗುತ್ತದೆ ಎಂಬುದನ್ನು ಪರಿಚಯಿಸುವ ಸಲುವಾಗಿ ಶಾಲೆಯಲ್ಲಿ ಮೆಟ್ರಿಕ್‌ ಮೇಳ ಸಂತೆಯನ್ನು ಆಯೋಜನೆ ಮಾಡಲಾಗಿತ್ತು.

5ನೇ ತರಗತಿ ಮಕ್ಕಳಿಗೆ ಮೆಟ್ರಿಕ್​ ಮೇಳ: ಶಾಲೆಯ ಐದನೇ ತರಗತಿ ವಿದ್ಯಾರ್ಥಿಗಳಿಗೆ ಮೆಟ್ರೀಕ್ ಮೇಳ ಆಯೋಜನೆ ಮಾಡಲಾಗಿತ್ತು. ಶಾಲೆಯ ಮೇಲ್ಭಾಗದಲ್ಲಿ ವಿದ್ಯಾರ್ಥಿಗಳ ತಂಡ ರಚನೆ ಮಾಡಿ ಒಂದೂಂದು ವ್ಯಾಪಾರವನ್ನು ಮಾಡಲು ಸೂಚನೆ ನೀಡಲಾಗಿತ್ತು. ಇದರಲ್ಲಿ ಸೂಪ್ಪು, ತರಕಾರಿ, ಬ್ಯಾಂಗಲ್ಸ್, ರೆಡಿಮೇಡ್ ತಿಂಡಿ ಸೇರಿದಂತೆ ಇತರ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿತ್ತು.

ಇಲ್ಲಿ ಮಾರಾಟಕ್ಕೆ ಕುಳಿತ ವಿದ್ಯಾರ್ಥಿಗಳಿಗೆ ತೂಕ ನಡೆಸುವುದು, ವ್ಯಾಪಾರದ ಚೌಕಾಸಿ ನಡೆಸುವುದು ಹಣ ಪಡೆದು ಚಿಲ್ಲರೆ ವಾಪಸ್ ನೀಡುವುದು, ಪ್ಯಾಕ್ ಮಾಡಿ ಕೊಡುವುದು ಸೇರಿದಂತೆ ಎಲ್ಲದರ ಮಾಹಿತಿಯು ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಲು ಹಾಗೂ ವ್ಯಾಪಾರದ ಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಪಠ್ಯವು ಸುಲಭವಾಗಿ ಅರ್ಥವಾಗುತ್ತದೆ ಎಂದು ಶಿಕ್ಷಕರು ತಿಳಿಸಿದರು.

ಇಲ್ಲಿ ವಿದ್ಯಾರ್ಥಿಗಳೆ ಮಾರಾಟಗಾರರು, ಗ್ರಾಹಕರು: ಮೆಟ್ರೀಕ್ ಮೇಳದಲ್ಲಿ ವ್ಯಾಪಾರಿಗಳು, ಗ್ರಾಹಕರು ವಿದ್ಯಾರ್ಥಿಗಳೆ ಆಗಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳು ಮಾರಾಟಗಾರರಾಗಿ ಕುಳಿತಾಗ ಅವರಲ್ಲಿ ಬಂದು ವಸ್ತುವಿನ ದರ ಕೇಳುವುದು, ಅದರ ಕುರಿತು ವಿವರಿಸುವುದು ಹಣ ಪಡೆದು ವಸ್ತುಗಳನ್ನು ನೀಡುವುದು, ಚಿಲ್ಲರೆ ‌ನೀಡುವುದು ಎಲ್ಲವು ಸಹ ಗಣಿತಕ್ಕೆ ಸಂಬಂಧಪಟ್ಟಂತೆ ಆಗುತ್ತದೆ. ಇನ್ನೂ ವಸ್ತುಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅದರ ಬಗ್ಗೆ ತಿಳಿಸುವುದು ವಿಜ್ಞಾನವಾಗುತ್ತದೆ. ನಾವೆಲ್ಲಾ ಇಲ್ಲಿ ತುಂಬ ವ್ಯಾಪಾರ ಮಾಡಿದೆವು. ಇದು ನಮ್ಮ ಪಠ್ಯಕ್ಕೆ ಹತ್ತಿರವಾಗಿದೆ. ಸುಲಭವಾಗಿ ಅರ್ಥವಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿನಿಯಾದ ಶ್ರೇತಾ ಅವರು.

ನಮ್ಮ ಶಾಲೆಯಲ್ಲಿ ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಮೆಟ್ರಿಕ್​ ಮೇಳವನ್ನು ನಡೆಸಲಾಗುತ್ತದೆ. ಇದು ಪಠ್ಯರಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಮೇಳ ಸಾಕಷ್ಟು ಅನುಕೂಲವಾಗುತ್ತದೆ ಎನ್ನುತ್ತಾರೆ ಮೆಟ್ರಿಕ್​ ಶಾಲಾ ಶಿಕ್ಷಕಿಯಾದ ದೀಪ ಕುಬಸದ್. ಇನ್ನು ಈ ಮೇಳ ಆಯೋಜನೆಯಿಂದ ವಿದ್ಯಾರ್ಥಿಗಳಿಗೆ ವ್ಯಾಪಾರದ ಬಗ್ಗೆ ಮತ್ತು ಜನರೊಂದಿಗೆ ಹೇಗೆ ವ್ಯವಹಾರ ನಡೆಸಬೇಕು ಮತ್ತು ಲೆಕ್ಕದ ಬಗ್ಗೆಯೂ ತಿಳಿದುಕೊಳ್ಳಬಹುದು ಎಂದು ಮೇಳದಲ್ಲಿ ಭಾಗವಹಿಸಿದ ಶಾಲಾ ವಿದ್ಯಾರ್ಥಿನಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ:ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ: ಮನಸೆಳೆದ ಸಿರಿಧಾನ್ಯ ಮಾರಾಟ, ಬಹುವಿಧದ ಭಕ್ಷ್ಯ ಖಾದ್ಯದ ಮಳಿಗೆಗಳು..!

ABOUT THE AUTHOR

...view details