ಶಿವಮೊಗ್ಗ: ಮಲೆನಾಡು, ಅರೆ ಬಯಲು ಸೀಮೆಯ ಜತೆ ಇತರೆ ಜಿಲ್ಲೆಯ ಜನರ ಪಾಲಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಸಂಜೀವಿನಿಯಾಗಿದೆ. ಸಿಮ್ಸ್ ಮೆಗ್ಗಾನ್ ಬೋಧನಾಸ್ಪತ್ರೆಯಲ್ಲಿ ಹರಿಗೆ, ಗರ್ಭಕೋಶ ಸಂಬಂಧಿತ ಆಪರೇಷನ್ ಹೀಗೆ ಹಲವು ಆಪರೇಷನ್ಗಳನ್ನು ಮಾಡಲಾಗುತ್ತದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತೀ ತಿಂಗಳು ಕನಿಷ್ಠ 800 ಆಪರೇಷನ್ಗಳು ನಡೆಯುತ್ತವೆ. ಇಷ್ಟೊಂದು ದೊಡ್ಡ ಪ್ರಮಾಣದ ಆಪರೇಷನ್ ಬೆಂಗಳೂರು ಬಿಟ್ಟರೆ ಶಿವಮೊಗ್ಗದಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದೆ.
ಮೆಗ್ಗಾನ್ ಬೋಧನಾಸ್ಪತ್ರೆಯಲ್ಲಿ ಒಟ್ಟು 16 ಆಪರೇಷನ್ ಥಿಯೇಟರ್ಗಳಿವೆ. ಆಸ್ಪತ್ರೆಯ 3 ಮತ್ತು 4ನೇ ಅಂತಸ್ತಿನಲ್ಲಿ ಆಪರೇಷನ್ ಥಿಯೇಟರ್ಗಳಿವೆ. 3ನೇ ಅಂತಸ್ತಿನಲ್ಲಿ 5 ಆಪರೇಷನ್ ಥಿಯೇಟರ್ಗಳಿದ್ದರೆ, 4ನೇ ಅಂತಸ್ತಿನಲ್ಲಿ 7 ಆಪರೇಷನ್ ಥಿಯೇಟರ್ಗಳಿವೆ. ಹೆರಿಗೆ ವಿಭಾಗದಲ್ಲಿ 4 ಆಪರೇಷನ್ ಥಿಯೇಟರ್ಗಳಿವೆ.
ಆಪರೇಷನ್ಗೆ ಬೇಕಾದ ಎಲ್ಲ ಆಧುನಿಕ ಸಲಕರಣೆಗಳಿವೆ:
ಮೆಗ್ಗಾನ್ ಬೋಧನಾಸ್ಪತ್ರೆಯಲ್ಲಿ ನಡೆಯುವ ಎಲ್ಲ ರಿತಿಯ ಆಪರೇಷನ್ಗಳಿಗೆ ಬೇಕಾದ ವೈದ್ಯಕೀಯ ಸಲಕರಣೆಗಳಿವೆ. ಇಲ್ಲಿ ಆಗದ ಆಪರೇಷನ್ಗಳನ್ನು ಬೇರೆ ಆಸ್ಪತ್ರೆಗಳಿಗೆ ಕಳುಹಿಸಿ ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆಯಡಿ ನಡೆಸಲಾಗುತ್ತದೆ.