ಶಿವಮೊಗ್ಗ: ಕೋವಿಡ್ -19ಗೆ ಔಷಧವಿಲ್ಲದೇ ಪ್ರಪಂಚವೇ ತತ್ತರಿಸಿ ಹೋಗಿದೆ. ಈ ರೋಗಕ್ಕೆ ಔಷಧ ಕಂಡು ಹಿಡಿಯಲು ಪ್ರಪಂಚದ ವಿಜ್ಞಾನಿಗಳೆಲ್ಲಾ ಸಾಕಷ್ಟು ಪ್ರಯೋಗ ನಡೆಸಿದ್ದರೂ ಫಲ ಮಾತ್ರ ಸಿಕ್ಕಿಲ್ಲ. ಆದರೆ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಆರ್ಯವೇದ ವೈದ್ಯ ದಂಪತಿ ಕೋವಿಡ್-19ಗೆ ಔಷಧ ಕಂಡು ಹಿಡಿದಿರುವುದಾಗಿ ತಿಳಿಸಿದ್ದಾರೆ.
ಆರ್ಯವೇದ ವೈದ್ಯ ದಂಪತಿಯಿಂದ ಕೋವಿಡ್ -19ಗೆ ಔಷಧ ಆವಿಷ್ಕಾರ
ಭದ್ರಾವತಿಯ ಉದ್ಗೀಥ್ ಆರ್ಯವೇದ ಚಿಕಿತ್ಸಾಲಯವನ್ನು ನಡೆಸುತ್ತಿರುವ ಡಾ.ಸುದರ್ಶನ್ ಆಚಾರ್ ಹಾಗೂ ಡಾ.ಕಾಂಚನ ಎ.ಕಂಕನ್ವಾಡಿ ಎಂಬ ದಂಪತಿ ಕೋವಿಡ್-19 ಎಂಬದು ಸಾಂಕ್ರಾಮಿಕ ರೋಗವಾಗಿದ್ದು, ಇದರ ಗುಣಲಕ್ಷಣದ ಮೇಲೆ ವ್ಯಾದಿಕ್ಷಮತ್ವ ವಿಧಾನ ಮಾದರಿಯ ಚಿಕಿತ್ಸೆ ನೀಡಿದರೆ ಗುಣಮುಖರಾಗುತ್ತಾರೆ ಎಂದು ತಿಳಿಸಿದ್ದು, ಇದಕ್ಕೆಡ ಬೇಕಾದ ಔಷಧವನ್ನು ಉಚಿತವಾಗಿ ಸರ್ಕಾರಕ್ಕೆ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಭದ್ರಾವತಿಯ ಉದ್ಗೀಥ್ ಆರ್ಯವೇದ ಚಿಕಿತ್ಸಾಲಯ ನಡೆಸುತ್ತಿರುವ ಡಾ.ಸುದರ್ಶನ್ ಆಚಾರ್ ಹಾಗೂ ಡಾ.ಕಾಂಚನ ಎ.ಕಂಕನ್ವಾಡಿ ಎಂಬ ದಂಪತಿ ಕೋವಿಡ್-19 ಎಂಬದು ಸಾಂಕ್ರಾಮಿಕ ರೋಗ, ಇದರ ಗುಣಲಕ್ಷಣದ ಮೇಲೆ ವ್ಯಾದಿಕ್ಷಮತ್ವ ವಿಧಾನ ಮಾದರಿಯ ಚಿಕಿತ್ಸೆ ನೀಡಿದಾಗ ಗುಣಮುಖರಾಗುತ್ತಾರೆ ಎಂದು ತಿಳಿಸಿದ್ದಾರೆ.
ಆರ್ಯವೇದದ ಗಿಡಮೂಲಿಕೆಗಳನ್ನು ಬಳಸಿಕೊಂಡು ಸಾರ್ಸ್, ಕೊರೊನ ಹಾಗೂ ಇತರ ವೈರಾಣುಗಳ ಮೇಲೆ ನಡೆದ ಹಲವಾರು ಸಂಶೋಧನೆಗಳ ಆಧಾರದ ಮೇಲೆ ಆರ್ಯವೇದ ಗ್ರಂಥಗಳ ಆಧಾರದ ಮೇಲೆ ಹಾಗೂ ತಮ್ಮ ಅನುಭವದ ಮೇಲೆ ವೈರಾಣುವನ್ನು ನಾಶ ಪಡಿಸಬಹುದಾದ ಗಿಡಮೂಲಿಕೆಗಳ ಮಿಶ್ರಣವನ್ನು ತಯಾರು ಮಾಡಿಲಾಗಿದೆ ಎಂದು ತಿಳಿಸಿದರು.