ಕರ್ನಾಟಕ

karnataka

ETV Bharat / state

ವಿಷಯಗಳು ಹಳ್ಳಿಯ ವ್ಯಕ್ತಿಗೂ ತಲುಪಬೇಕಾದರೆ ಮಾಧ್ಯಮ ಅಗತ್ಯ: ಈಶ್ವರಪ್ಪ - ಮಾಧ್ಯಮ ಮಂಥನ ಕಾರ್ಯಕ್ರಮ

ವ್ಯಕ್ತಿ ಪಕ್ಷದಲ್ಲಿ ಉಳಿಯಬೇಕಾದರೆ ವಿಚಾರ ಹಾಗೂ ಸಿದ್ಧಾಂತ ಅರ್ಥ ಮಾಡಿಕೊಳ್ಳುವ ದಿಕ್ಕಿನಲ್ಲಿ ಮಾಧ್ಯಮದ ಪಾತ್ರ ಬಹಳ ಮುಖ್ಯ. ಪಕ್ಷದ ಬೆಳವಣಿಗೆ ಹಾಗೂ ಪಕ್ಷದ ವಿಚಾರಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಮಾಧ್ಯಮ ಮಾಡಬೇಕಿದೆ ಎಂದು ಈಶ್ವರಪ್ಪ ಹೇಳಿದರು.

Media churn program in shimogga
ಕೆ.ಎಸ್ ಈಶ್ವರಪ್ಪ

By

Published : Mar 21, 2021, 6:14 PM IST

ಶಿವಮೊಗ್ಗ: ವಿಚಾರಗಳು ಸಣ್ಣ ಹಳ್ಳಿಯ ವ್ಯಕ್ತಿಗೂ ತಲುಪಬೇಕಾದರೆ ಮಾಧ್ಯಮ ತುಂಬಾ ಮುಖ್ಯವಾದದ್ದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಕೆ.ಎಸ್.ಈಶ್ವರಪ್ಪ, ಸಚಿವ

ನಗರದ ರಾಘವ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ಪಕ್ಷದ ಮಾಧ್ಯಮ ಮೋರ್ಚಾದ ಕಾರ್ಯಕರ್ತರಿಗೆ ಆಯೋಜಿಸಿದ್ದ ಮಾಧ್ಯಮ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷಕ್ಕೆ ಸಾಕಷ್ಟು ಜನ ಬರ್ತಾರೆ, ಹೋಗ್ತಾರೆ. ಕೆಲವರು ಅಧಿಕಾರಕ್ಕಾಗಿ ಬಂದರೆ, ಇನ್ನೂ ಕೆಲವರು ಬೇರೆ ಬೇರೆ ಕಾರಣಕ್ಕಾಗಿ ಪಕ್ಷಕ್ಕೆ ಬರಬಹುದು.

ವ್ಯಕ್ತಿ ಪಕ್ಷದಲ್ಲಿ ಉಳಿಯಬೇಕಾದರೆ ವಿಚಾರ ಹಾಗೂ ಸಿದ್ಧಾಂತ ಅರ್ಥ ಮಾಡಿಕೊಳ್ಳುವ ದಿಕ್ಕಿನಲ್ಲಿ ಮಾಧ್ಯಮದ ಪಾತ್ರ ಬಹಳ ಮುಖ್ಯ. ಪಕ್ಷದ ಬೆಳವಣಿಗೆ ಹಾಗೂ ಪಕ್ಷದ ವಿಚಾರಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಮಾಧ್ಯಮ ಮಾಡಬೇಕಿದೆ ಎಂದು ಪಕ್ಷದ ಮಾಧ್ಯಮ ಮೋರ್ಚಾದ ಕಾರ್ಯಕರ್ತರಿಗೆ ಸಲಹೆ ನೀಡಿದರು.

ABOUT THE AUTHOR

...view details