ಶಿವಮೊಗ್ಗ: ನಗರದ ಯುವಕನೊಬ್ಬ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಕೇವಲ ಒಂದು ನಿಮಿಷದಲ್ಲಿ ಮೂರು ಸ್ಟೀಲ್ ಗ್ಲಾಸ್ಗಳ ಮೇಲೆ 110 ಪುಷ್ ಅಪ್ ತೆಗೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ. ಒಂದು ನಿಮಿಷದಲ್ಲಿ ಮೂರು ಸ್ಟೀಲ್ ಗ್ಲಾಸ್ಗಳಲ್ಲಿ ಗರಿಷ್ಠ ಸಂಖ್ಯೆಯ ಪುಷ್-ಅಪ್ಗಳನ್ನು ಪ್ರದರ್ಶಿಸಿದ ಸಾಧನೆಯನ್ನು ಶಿವಮೊಗ್ಗದ ಡಾ ರಾಹುಲ್ ದೇವರಾಜ್ (ಮಾರ್ಚ್ 29, 1996 ರಂದು ಜನನ) ಮಾಡಿದ್ದಾರೆ.
ನಿಮಿಷದಲ್ಲಿ ಮೂರು ಸ್ಟೀಲ್ ಗ್ಲಾಸ್ಗಳ ಮೇಲೆ 110 ಪುಷ್-ಅಪ್.. ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಶಿವಮೊಗ್ಗ ಯುವಕನ ಸಾಧನೆ - ಸ್ಟೀಲ್ ಗ್ಲಾಸ್ಗಳ ಮೇಲೆ 110 ಪುಷ್ ಅಪ್
ಒಂದು ನಿಮಿಷದಲ್ಲಿ ಮೂರು ಸ್ಟೀಲ್ ಗ್ಲಾಸ್ಗಳ ಮೇಲೆ 110 ಪುಷ್ - ಅಪ್ಗಳು ಹೊಡೆಯುವ ಮೂಲಕ ಶಿವಮೊಗ್ಗದ ಯುವಕ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಬರೆದಿದ್ದಾರೆ.
ನೆಲದ ಮೇಲೆ ತಲೆಕೆಳಗಾಗಿ ಇರಿಸಲಾದ ಮೂರು ಸ್ಟೀಲ್ ಗ್ಲಾಸ್ಗಳ ಮೇಲೆ ಕಾಲು ಮತ್ತು ಕೈಗಳನ್ನಿಟ್ಟು ತಮ್ಮನ್ನು ತಾವು ಸಮತೋಲನಗೊಳಿಸಿಕೊಂಡು 110 ಪುಷ್-ಅಪ್ಗಳನ್ನು ತೆಗೆದರು. ಈ ವಿಡಿಯೋವನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಿಯಮದಂತೆ ಕಳುಹಿಸಿದರು. ಅವರು ಕಳುಹಿಸಿದ ವಿಡಿಯೋವನ್ನು ಸೆಪ್ಟೆಂಬರ್ 9, 2022 ರಂದು ದೃಢಪಡಿಸಲಾಗಿದ್ದು, ನಿನ್ನೆ ಡಾ.ರಾಹುಲ್ ದೇವರಾಜ್ಗೆ ಪ್ರಶಸ್ತಿ ನೀಡಿದರು. ಈ ಯುವಕನ ಸಾಧನೆ ಬಗ್ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಟ್ವೀಟ್ ಮಾಡಿದೆ.
ಓದಿ:ಬಿದಿರಿನಿಂದ ಬಾಟಲ್ ತಯಾರಿ: ಕಾಜಿರಂಗ ಯುವಕನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಮನ್ನಣೆ