ಶಿವಮೊಗ್ಗ : ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರಕ್ಕಾಗಿ ಅವರ ಕುಟುಂಬಸ್ಥರಿಗೆ ಮಹಾನಗರ ಪಾಲಿಕೆಯಿಂದ ನೀಡುವ ಪಿಪಿಇ ಕಿಟ್ನಲ್ಲಿ ಸುರಕ್ಷಾ ಸಾಧನಗಳಾದ ಹ್ಯಾಂಡ್ ಗ್ಲೌಸ್, ಫೇಸ್ ಮಾಸ್ಕ್, ಸಾಕ್ಸ್ಗಳೇ ಇಲ್ಲ ಎಂಬ ಆರೋಪ ಕೇಳಿ ಬಂದಿದೆ.
ಪಿಪಿಇ ಕಿಟ್ನಲ್ಲಿ ಮಾಸ್ಕ್, ಗ್ಲೌಸ್ ಕಣ್ಮರೆ.. ಕಣ್ಣೀರಿಟ್ಟ ಮೃತನ ಸಂಬಂಧಿ.. ಕೋವಿಡ್ ಶವವನ್ನು ಜಿಲ್ಲಾಡಳಿತ ನೇಮಕ ಮಾಡಿರುವ ಆ್ಯಂಬುಲೆನ್ಸ್ಗಳಲ್ಲಿಯೇ ಸಾಗಿಸಬೇಕಿದೆ. ಇದರಿಂದ ಶವ ಸಾಗಾಟ, ಶವವನ್ನು ದಹಿಸಲು ಸಹಕರಿಸುವವರಿಗೆ ಈ 4 ಪಿಪಿಇ ಕಿಟ್ ಉಪಯೋಗಕ್ಕೆ ಬರುತ್ತವೆ.
ಆದರೆ, ಇದರಲ್ಲಿ ಹ್ಯಾಂಡ್ ಗ್ಲೌಸ್, ಫೇಸ್ಮಾಸ್ಕ್, ಸಾಕ್ಸ್ಗಳೇ ಇಲ್ಲ ಎಂದ ಮೇಲೆ ಹೇಗೆ ಶವವನ್ನು ಸಾಗಿಸಬೇಕು, ಹೇಗೆ ಮುಟ್ಟಬೇಕು ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಅಲ್ಲದೆ ಆ್ಯಂಬುಲೆನ್ಸ್ ಚಾಲಕರು ಸಹ ಪಿಪಿಇ ಕಿಟ್ ಸಮರ್ಪಕ ರೀತಿಯಲ್ಲಿ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಉತ್ತಮವಾದ ಪಿಪಿಇ ಕಿಟ್ ನೀಡಬೇಕು ಎಂದು ಸೂಚನೆ ನೀಡಿದ್ದರು. ಇಷ್ಟಾದರೂ ಪಿಪಿಇ ಕಿಟ್ನಲ್ಲಿ ಸಮರ್ಪಕ ಸಾಧನೆಗಳು ನಾಪತ್ತೆಯಾಗಿದೆ ಎಂಬುದು ಕುಟುಂಬಸ್ಥರ ಆರೋಪವಾಗಿದೆ.