ಶಿವಮೊಗ್ಗ : ಕೊರೊನಾ ವೈರಸ್ ವಿರುದ್ದದ ಹೋರಾಟದಲ್ಲಿ ಮಾಸ್ಕ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾಸ್ಕ್ ಡೇ ಆಚರಿಸುವಂತೆ ಆದೇಶ ನೀಡಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ಚರಪ್ಪನವರು ಮಾಸ್ಕ್ ಜಾಥವನ್ನು ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿಗಳ ಆವರಣದಿಂದ ಪ್ರಾರಂಭವಾದ ಜಾಥವು ಬಾಲರಾಜ್ ಅರಸ್ ರಸ್ತೆಯಿಂದ ಗೋಪಿ ವೃತ್ತದವರೆಗೂ ಸಾಗಿತು.
ಶಿವಮೊಗ್ಗ ಜಿಲ್ಲಾದ್ಯಾಂತ ಮಾಸ್ಕ್ ಡೇ ಆಚರಣೆ
ರಾಜ್ಯ ಸರ್ಕಾರ ಮಾಸ್ಕ್ ಡೇ ಆಚರಿಸುವಂತೆ ಆದೇಶ ನೀಡಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ಚರಪ್ಪನರವರು ಮಾಸ್ಕ್ ಜಾಥವನ್ನು ನಡೆಸಿದರು.
ಜಾಥದಲ್ಲಿ ಸಚಿವ ಈಶ್ವರಪ್ಪನವರ ಜೊತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಡಿಸಿ ಅನುರಾಧ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು. ಮಾಸ್ಕ್ ಧರಿಸಿಕೊಂಡು ಇರುವುದರಿಂದ ವೈರಸ್ನಿಂದ ದೂರ ಇರಬಹುದಾಗಿದೆ. ಇದರಿಂದ ನಮ್ಮನ್ನು ನಾವು ಕೋವಿಡ್ನಿಂದ ದೂರ ಇರಬಹುದಾಗಿದೆ.
ಇದರಿಂದ ಸಾರ್ವಜನಿಕರು ಸಹ ಮಾಸ್ಕ್ ಧರಿಸಿ, ಅಂತರ ಕಾಪಾಡಿ ಕೊಂಡು ಕೋವಿಡ್ -19 ನಿಂದ ದೂರ ಇರಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿನಂತಿ ಮಾಡಿಕೊಂಡರು. ಇದೇ ವೇಳೆ ಶಿಕಾರಿಪುರದಲ್ಲಿ ಸಂಸದ ರಾಘವೇಂದ್ರರವರು, ತಾಲೂಕು ಆಡಳಿತ ಭವನದಿಂದ ಖಾಸಗಿ ಬಸ್ ನಿಲ್ದಾಣದ ವರೆಗೂ ಜಾಥ ನಡೆಸಿ, ಸಾರ್ವಜನಿಕರಿಗೆ ಮಾಸ್ಕ್ ವಿತರಿಸಲಾಯಿತು.