ಶಿವಮೊಗ್ಗ :ಈಟಿವಿ ಭಾರತ ಪ್ರಸಾರ ಮಾಡಿದ ಸುದ್ದಿಯಿಂದ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ತೋಟಗಾರಿಕಾ ಬೆಳೆಗಳಾದ ಕಲ್ಲಂಗಡಿ ಹಾಗೂ ಪೈನಾಪಲ್‌ಗಳನ್ನು ಎಪಿಎಂಸಿ ಮೂಲಕ ಖರೀದಿಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ತಿಳಿಸಿದ್ದಾರೆ. ನಿನ್ನೆ ಈ ಟಿವಿ ಭಾರತ 'ಸಂಕಷ್ಟದಲ್ಲಿ ಪೈನಾಪಲ್, ಕಲ್ಲಂಗಡಿ ಬೆಳೆದ ರೈತರು' ಎಂಬ ಶೀರ್ಷಿಕೆ ಅಡಿ ವರದಿ ಪ್ರಸಾರ ಮಾಡಿತ್ತು. ಇದಕ್ಕೆ ಸ್ಪಂದಿಸಿ ಡಿಸಿ, ನಿನ್ನೆ ಸೊರಬ ಹಾಗೂ ಸಾಗರಕ್ಕೆ ಭೇಟಿ ನೀಡಿದಾಗ ರೈತರು ಸಹ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.
ಸೊರಬದಲ್ಲಿ ಪೈನಾಪಲ್ ಸಂಸ್ಕರಿಸಿ ವಿವಿಧ ಉತ್ಪನ್ನ ತಯಾರಿಸುವ ಮೂರು ಅಗ್ರೋ ಕಾರ್ಖಾನೆಗಳಿವೆ. ಈ ಕಾರ್ಖಾನೆಯ ಮಾಲೀಕರ ಜೊತೆ ಮಾತನಾಡಿದ್ದೇವೆ. ಅವರು ತಮ್ಮ ಕಾರ್ಖಾನೆಯನ್ನು ಇಂದು ತೆಗೆಯುವುದಾಗಿ ತಿಳಿಸಿದ್ದಾರೆ. ಇದ್ದ ಸಣ್ಣಪುಟ್ಟ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಲಾಗಿದೆ. ನಮ್ಮ ಜಿಲ್ಲೆಯಲ್ಲಿ ತೋಟಗಾರಿಕಾ ಉಪ ನಿರ್ದೇಶಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಅವರು ತೋಟಗಾರಿಕ ಬೆಳೆಗಳನ್ನು ಎಪಿಎಂಸಿ ಮೂಲಕ ಖರೀದಿ ಮಾಡಿ ಮಾರಾಟ ಮಾಡುವ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಸಾಗಾಟಕ್ಕೆ ಲಾರಿ ಮಾಲೀಕರ ಸಂಘದ ಜೊತೆ ಸಹ ಸಭೆ ನಡೆಸಲಿದ್ದಾರೆ ಎಂದರು.