ಶಿವಮೊಗ್ಗ:ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಸ್ಫೋಟ ಸಂಭವಿಸಿದ ಪ್ರಕರಣ ಸಂಬಂಧ ತೀರ್ಥಹಳ್ಳಿಯಲ್ಲಿ ಆರೋಪಿ ಶಾರೀಖ್ ಹಾಗು ಆತನ ಸಂಬಂಧಿಕರ ನಿವಾಸಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ತೀರ್ಥಹಳ್ಳಿಯಲ್ಲಿ ನಾಲ್ಕು ಮನೆಗಳು ಹಾಗು ಸೊಪ್ಪುಗಡ್ಡೆಯಲ್ಲಿರುವ ಶಾರೀಖ್ ನಿವಾಸದಲ್ಲಿ ಶೋಧಕಾರ್ಯ ನಡೆಯುತ್ತಿದೆ.
ಆಟೋ ರಿಕ್ಷಾ ಸ್ಫೋಟ ಕೇಸ್: ಆರೋಪಿ ಶಾರೀಖ್ ನಿವಾಸದ ಮೇಲೆ ಪೊಲೀಸ್ ದಾಳಿ - ಆಟೋ ರಿಕ್ಷಾದಲ್ಲಿ ಸ್ಫೋಟ ಪ್ರಕರಣ
ಮಂಗಳೂರು ಆಟೋ ರಿಕ್ಷಾದಲ್ಲಿ ಸ್ಫೋಟ ಪ್ರಕರಣ. ಆರೋಪಿ ಶಾರೀಖ್ ನಿವಾಸ ಹಾಗು ಆತನ ಸಂಬಂಧಿಕರ ನಿವಾಸದ ಮೇಲೆ ಪೊಲೀಸ್ ದಾಳಿ.
ಇದನ್ನೂ ಓದಿ:ಮಂಗಳೂರು ಆಟೋರಿಕ್ಷಾ ಸ್ಫೋಟ ಪ್ರಕರಣ: ಆರೋಪಿ ಗುರುತಿಸಲು ಶಾರೀಕ್ ಕುಟುಂಬಸ್ಥರ ಆಗಮನ
ಆಸ್ಪತ್ರೆಗೆ ಕುಟುಂಬಸ್ಥರ ಭೇಟಿ:ನ.19 ರಂದು ಗರೋಡಿ ಸಮೀಪದ ರಸ್ತೆಯಲ್ಲಿ ಸಂಚರಿಸುತ್ತಿದ್ದ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾಗಿತ್ತು. ಚಾಲಕ ಪುರುಷೋತ್ತಮ್ ಮತ್ತು ಆರೋಪಿ ಗಾಯಗೊಂಡಿದ್ದರು. ಇಬ್ಬರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ, ಆರೋಪಿಯ ಮುಖ ವಿರೂಪಗೊಂಡಿದ್ದು ಗುರುತಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಶಾರೀಖ್ ಎಂಬಾತನ ಕುಟುಂಬವನ್ನು ಮಂಗಳೂರಿಗೆ ಕರೆತರಲಾಗಿದೆ. ಇದೀಗ ಆತನ ಸಹೋದರಿ, ಚಿಕ್ಕಮ್ಮ ಮತ್ತು ಕುಟುಂಬದ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ಗುರುತು ಪತ್ತೆ ಹಚ್ಚಲಿದ್ದಾರೆ.