ಕರ್ನಾಟಕ

karnataka

ETV Bharat / state

ಸಿಗಂದೂರು ಬಳಿ ಶರಾವತಿ ಹಿನ್ನೀರಿನಲ್ಲಿ ಲಾಂಚ್​ನಿಂದ ಹಾರಿದ ವ್ಯಕ್ತಿ! - Shigandur launch man suicide

ಲಾಂಚ್​​ನಲ್ಲಿದ್ದ ಪ್ರಯಾಣಿಕರು ನೋಡನೋಡುತ್ತಿದ್ದಂತೆಯೇ ವ್ಯಕ್ತಿ ನೀರಿನಲ್ಲಿ ಮುಳುಗಿದ್ದಾನೆ. ಸದ್ಯ ವ್ಯಕ್ತಿಯ ಮೃತದೇಹಕ್ಕಾಗಿ ಸಾಗರದ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶರಾವತಿ ಹಿನ್ನಿರಿನ ಲಾಂಚ್ ನಿಂದ ಹಾರಿ ವ್ಯಕ್ತಿ ಆತ್ಮಹತ್ಯೆ

By

Published : Sep 28, 2019, 6:36 PM IST

ಶಿವಮೊಗ್ಗ: ಜಿಲ್ಲೆಯ ಸಿಗಂದೂರು ಬಳಿಯ ಶರಾವತಿ ಹಿನ್ನೀರಿನಲ್ಲಿ ಚಲಿಸುತ್ತಿದ್ದ ಲಾಂಚ್​ನಿಂದ ಅಪರಿಚಿತ ವ್ಯಕ್ತಿಯೊಬ್ಬ ಜಿಗಿದು ಅತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಹೊಳೆಬಾಗಿಲು ಕಡೆಯಿಂದ ತುಮರಿ ಕೆಡ ಹೊರಟಿದ್ದ ಲಾಂಚ್​ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಏಕಾಏಕಿ ನೀರಿಗೆ ಧುಮುಕಿದ್ದಾನೆ. ಈ ವೇಳೆ ಲಾಂಚ್ ಸಿಬ್ಬಂದಿ ಅಪರಿಚಿತ ವ್ಯಕ್ತಿಯನ್ನು ಬಚಾವ್ ಮಾಡಲು ಪ್ರಯತ್ನ ಪಟ್ಟರೂ ಸಹ ವಿಫಲವಾಗಿದೆ.

ಸಿಗಂದೂರಲ್ಲಿ ಲಾಂಚ್​ನಿಂದ ಹಾರಿದ ವ್ಯಕ್ತಿ

ಲಾಂಚ್​​ನಲ್ಲಿದ್ದ ಪ್ರಯಾಣಿಕರು ನೋಡನೋಡುತ್ತಿದ್ದಂತೆಯೇ ವ್ಯಕ್ತಿ ನೀರಿನಲ್ಲಿ ಮುಳುಗಿದ್ದಾನೆ. ಸದ್ಯ ವ್ಯಕ್ತಿಯ ಮೃತದೇಹಕ್ಕಾಗಿ ಸಾಗರದ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details