ಕರ್ನಾಟಕ

karnataka

ETV Bharat / state

ಶಿವಮೊಗ್ಗ: ದುಷ್ಕರ್ಮಿಗಳಿಂದ  ವ್ಯಕ್ತಿಯೊಬ್ಬನ ಕೊಲೆ - ಕೊಲೆ

ಶಿವಮೊಗ್ಗದ ವೆಂಕಟೇಶ ನಗರದ ಎ.ಎನ್.ಕೆ ರಸ್ತೆ ಮೊದಲನೇ ತಿರುವಿನಲ್ಲಿ ವಿಜಯ್ ಎಂಬ ವ್ಯಕ್ತಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಚಾಕುವಿನಿಂದ ಚುಚ್ಚಿ‌ ಕೊಲೆ ಮಾಡಿದ್ದು, ಜಯನಗರ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಕೊಲೆ
ಕೊಲೆ

By

Published : Oct 25, 2022, 9:11 AM IST

Updated : Oct 25, 2022, 9:49 AM IST

ಶಿವಮೊಗ್ಗ: ವೈಯಕ್ತಿಕ ಕಾರಣಕ್ಕೆ ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚಿ ಕೊಲೆ‌ ಮಾಡಿರುವ ಘಟನೆ ಶಿವಮೊಗ್ಗದ ವೆಂಕಟೇಶ ನಗರದ ಎ.ಎನ್.ಕೆ ರಸ್ತೆ ಮೊದಲನೇ ತಿರುವಿನಲ್ಲಿ ನಡೆದಿದೆ. ವಿಜಯ್​​ (37) ಕೊಲೆಯಾದ ವ್ಯಕ್ತಿ. ವಿಜಯ್ ಶಿವಮೊಗ್ಗದ ಭಾರತ ನ್ಯೋರೂ ಕ್ಲಿನಿಕ್​ನಲ್ಲಿ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ನಿನ್ನೆ ರಾತ್ರಿ ತಮ್ಮ ತಂದೆ ಹಾಗೂ ಕುಟುಂಬದವರ ಜೊತೆ ಚಲನಚಿತ್ರ ವೀಕ್ಷಣೆ ಮಾಡಿ ಮನೆಗೆ ಬಂದಿದ್ದಾರೆ. ಮನೆಗೆ ಬಂದ ವಿಜಯ್​ಗೆ ಪೋನ್ ಬಂದಿದೆ. ತಕ್ಷಣ ವಿಜಯ್ ಮನೆಯಿಂದ ಹೊರಗೆ ಹೋಗಿದ್ದಾರೆ. ಪೋನ್ ಮಾಡಿದವರು ಎ.ಎನ್.ಕೆ ರಸ್ತೆಗೆ ಕರೆಯಿಸಿಕೊಂಡು ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ. ವಿಜಯ್ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದು, ಗಾಂಧಿನಗರದಲ್ಲಿ ವಾಸ ಮಾಡುತ್ತಿದ್ದರು. ಕೊಲೆಗೆ ಕುಟುಂಬ ಕಲಹವೇ ಕಾರಣ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ:ಶಿವಮೊಗ್ಗ: ದೊಣ್ಣೆಯಿಂದ ಹೊಡೆದು ಆಟೋ ಚಾಲಕನ ಕೊಲೆ

ಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶವವನ್ನು ಮೆಗ್ಗಾನ್ ಆಸ್ಪತ್ರೆ ಶವಗಾರಕ್ಕೆ ರವಾನೆ ಮಾಡಿದ್ದಾರೆ. ಕೊಲೆ ದೃಶ್ಯ ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಬ್ಬರು ವಿಜಯ್​​ ಅವರನ್ನು ಓಡಿಸಿಕೊಂಡು ಬಂದು ಚಾಕುವಿನಿಂದ ಚುಚ್ಚಿ‌ ಕೊಲೆ ಮಾಡಿದ್ದಾರೆ. ಜಯನಗರ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

Last Updated : Oct 25, 2022, 9:49 AM IST

ABOUT THE AUTHOR

...view details